ಪಿ.ಪಿ.ವಿ ಮತ್ತು ಎಫ್.ಆರ್.ಎ. ಪ್ರಶಸ್ತಿ ಪಡೆದ ರೈತರು


ಸಸ್ಯ ತಳಿ ಮತ್ತು ರೈತರ ಹಕ್ಕುಗಳ ರಕ್ಷಣೆ ಪ್ರಾಧಿಕಾರ (ಪಿ.ಪಿ.ವಿ ಮತ್ತು ಎಫ್.ಆರ್.ಎ)ನ್ನು ಕೇಂದ್ರ ಸರ್ಕಾರವು ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ 2001ರಡಿಯಲ್ಲಿ ಸ್ಥಾಪಿಸಿತು. ಈ ಪ್ರಾಧಿಕಾರವು ವಿಶೇಷ ಹಕ್ಕುಗಳನ್ನು ತಳಿಗಾರರು ಮತ್ತು ತಳಿಯನ್ನು ಅಭಿವೃದ್ಧಿಪಡಿಸಿದ ರೈತರಿಗೆ ನೀಡಲಾಗಿದೆ. ಸಸ್ಯ ತಳಿ ಮತ್ತು ರೈತರ ಹಕ್ಕುಗಳ ರಕ್ಷಣೆ ಪ್ರಾಧಿಕಾರವು ವರ್ಗ 45ರ ಪಿ.ಪಿ.ವಿ ಮತ್ತು ಎಫ್.ಆರ್.ಎ ಕಾಯಿದೆಗೆ 2001ರ ನಿಯಮ 70(2)ನೆಯ ನಿಭಂದನೆಗೆ ಒಳಪಟ್ಟಿದ್ದು,( ಪಿ.ಪಿ.ವಿ ಮತ್ತು ಎಫ್.ಆರ್.ಎ ನಿಯಮ 2003)ರ ಸಸ್ಯ ಜೀನೋಮ್ ಸಂರಕ್ಷಕ ಸಮುದಾಯ ಪ್ರಶಸ್ತಿಯಾಗಿದೆ. ಪ್ರಾಧಿಕಾರವು ಸಸ್ಯ ಜೀನೋಮ್ ಸಂರಕ್ಷಕ ಸಮುದಾಯ ಪ್ರಶಸ್ತಿಯನ್ನು ವಾರ್ಷಿಕವಾಗಿ ನಿರಂತರವಾಗಿ ಸಂರಕ್ಷಿಸಿದ ಸಸ್ಯ ಕೃಷಿ-ಜೀವವೈವಿಧ್ಯ ರೈತರು/ರೈತ ಸಮುದಾಯ ಸಂಘಗಳಿಗೆ ಅರ್ಜಿ ಮುಖೇನ ಸ್ವೀಕರಿಸಿ, ಪರಿಶೀಲನೆ ನಡೆಸಿ, ಪಟ್ಟಿಮಾಡಿ ಹಾಗೂ ಸ್ಥಳ ಪರಿಶೀಲನೆ ನಡೆಸಿ ನೀಡುತ್ತದೆ. ವರ್ಷದಲ್ಲಿ 5 ಪ್ರಶಸ್ತಿಗಳಿದ್ದು 10 ಲಕ್ಷರೂಗಳ ನಗದು ಪುರಸ್ಕಾರ ಹಾಗೂ ಉಲ್ಲೇಖ/ಸ್ಮಾರಕವನ್ನು ನೀಡಲಾಗುವುದು.

ಐಸಿಎಆರ್ ಜೆಎಸ್ಎಸ್ ಕೆವಿಕೆಯು ಪ್ರಗತಿಪರ ತಳಿ ಸಂರಕ್ಷಕ ರೈತರಿನ್ನು ಗುರುತಿಸಿ ಕೆವಿಕೆ ಮುಖೇನ ಸಸ್ಯ ತಳಿ ಮತ್ತು ರೈತರ ಹಕ್ಕುಗಳ ರಕ್ಷಣೆ ಪ್ರಾಧಿಕಾರ (ಪಿ.ಪಿ.ವಿ ಮತ್ತು ಎಫ್.ಆರ್.ಎ)ಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದೆ. ಹೀಗೆ ಅರ್ಜಿ ಅನುಮೋದನೆಗೊಂಡು ಪ್ರಶಸ್ತಿ ಪಡೆದ ರೈತರ ಪಟ್ಟಿ ಈ ಕೆಳಕಂಡಂತಿದೆ.

ರೈತರ ಹೆಸರು : ಶ್ರೀ ಎಂ. ರೇಚಣ್ಣ
ಸಂಪರ್ಕ ವಿಳಾಸ : ಹೊಸ ಮಾಲಂಗಿ @ ಪೋಸ್ಟ್, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ, ಕರ್ನಾಟಕ
ದೂರವಾಣಿ ಸಂಖ್ಯೆ : 9481321530
ಸಂರಕ್ಷಣಾ ಪ್ರಯತ್ನಗಳು : ಭತ್ತ, ಉದ್ದು, ಅಲಸಂದೆ, ಹಸರು ಮತ್ತು ಎಳ್ಳು
ಒಟ್ಟು ತಳಿಗಳನ್ನು ಸಂರಕ್ಷಿಸಿರುವುದು : ಭತ್ತ-200, ಉದ್ದು-1, ಅಲಸಂದೆ – 3, ಹೆಸರು-2 and ಎಳ್ಳು – 2
ವಿಸ್ತೀರ್ಣ : 3 ಎಕರೆ
ನವೀನ ವಿಧಾನಗಳಲ್ಲಿ ಭಾಗಿಯಾಗಿರುವುದು : In-situ ಸಂರಕ್ಷಣೆ 12 ವರ್ಷಗಳಿಂದ
ಪ್ರಶಸ್ತಿ ವರ್ಷ : 2014
ರೈತರ ಹೆಸರು : ಶ್ರೀ ಎಂ.ಕೆ. ಶಂಕರಗುರು
ವಿಳಾಸ : ಮಾಡ್ರಹಳ್ಳಿ, ಕನ್ನಹಳ್ಳಿ ಅಂಚೆ, ತಿ. ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ, ಕರ್ನಾಟಕ-571442
ದೂರವಾಣಿ ಸಂಖ್ಯೆ : 9900658921
ಸಂರಕ್ಷಣಾ ಪ್ರಯತ್ನಗಳು : Paddy
ಒಟ್ಟು ತಳಿಗಳನ್ನು ಸಂರಕ್ಷಿಸಿರುವುದು : ಭತ್ತ-14
ವಿಸ್ತೀರ್ಣ : 3 ಎಕರೆ
ನವೀನ ವಿಧಾನಗಳಲ್ಲಿ ಭಾಗಿಯಾಗಿರುವುದು : In-situ ಸಂರಕ್ಷಣೆ 23 ವರ್ಷಗಳಿಂದ
ಇತರೆ ಸಂಘಗಳವರು ಗುರುತಿಸಿರುವುದು : ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್
ಪ್ರಶಸ್ತಿ ವರ್ಷ : 2014
ರೈತರ ಹೆಸರು : ಶ್ರೀ ಎಸ್. ಆರ್. ಶ್ರೀನಿವಾಸ್ ಮೂರ್ತಿ
ವಿಳಾಸ : ಸಿದ್ಧನಹುಂಡಿ, ವ್ಯಾಸರಾಜಪುರ ಅಂಚೆ, ತಿ. ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ, ಕರ್ನಾಟಕ - 571120
ದೂರವಾಣಿ ಸಂಖ್ಯೆ : 9900746499
ಸಂರಕ್ಷಣಾ ಪ್ರಯತ್ನಗಳು : ಭತ್ತ, ರಾಗಿ, ಉದ್ದು ಮತ್ತು ಅಲಸಂದೆ
ಒಟ್ಟು ತಳಿಗಳನ್ನು ಸಂರಕ್ಷಿಸಿರುವುದು : ಭತ್ತ-100 ಮತ್ತು ರಾಗಿ-2
ವಿಸ್ತೀರ್ಣ : 1 ಎಕರೆ
ನವೀನ ವಿಧಾನಗಳಲ್ಲಿ ಭಾಗಿಯಾಗಿರುವುದು : In-situ ಸಂರಕ್ಷಣೆ, ಶ್ರೀ ಪದ್ಧತಿಯಡಿಯಲ್ಲಿ ಭತ್ತ ಬಿತ್ತನೆ ಡ್ರಂ ಸೀಡರ್ ಮತ್ತು ಕೋನೋ ವೀಡರ್ ಉಪಯೋಗ
ಇತರೆ ಸಂಘಗಳವರು ಗುರುತಿಸಿರುವುದು : ತಾಲ್ಲೂಕು ಮಟ್ಟ (ರಾಜ್ಯೋತ್ಸವ ಪ್ರಶಸ್ತಿ), ರಾಜ್ಯ ಮಟ್ಟ(ನವರಾತ್ರಿ ರೈತೋತ್ಸವ)
ಪ್ರಶಸ್ತಿಯ ವರ್ಷ : 2017
ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: