ಕೋವಿಡ್ 19ರ ಉಪಕ್ರಮಗಳು


ಕೋವಿಡ್ 19 ಸಾಂಕ್ರಾಮಿಕ ರೋಗವು ನಮ್ಮ ಜೀವನದ ಕ್ರಮವನ್ನು ಬದಲು ಮಾಡಿದೆ. ಕೋವಿಡ್19ರ ಪರಿಣಾಮ ಎಲ್ಲಾ ರಂಗಗಳಲ್ಲೂ ಬೆದರಿಕೆಯೊಡ್ಡಿದೆ. ಕೃಷಿ ವಲಯವೂ ಸಹ ಕೋವಿಡ್ 19ರ ಹೊಡೆತ ತಿಂದಿದೆ. ರೈತರು ಸರಿಯಾದ ಸಮಯಕ್ಕೆ ಮಾರುಕಟ್ಟೆ ಸಿಗದೆ, ಸೂಕ್ತ ಸಲಹೆ-ಸೂಚನೆ ಇಲ್ಲದೆ ಹಾಗೂ ಕೃಷಿ ಪರಿಕರ ಕೊರತೆಯನ್ನು ಎದುರಿಸುತ್ತಿದ್ದಾರೆ.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಆಗ್ರಿ ವಾರ್ ರೂಂ ಎಂಬ ಪರಿಕಲ್ಪನೆಯೊಂದಿಗೆ ಮುಂದಡಿಯಿಟ್ಟಿದ್ದು ಇದರಿಂದ ರೈತರಿಗೆ ಸೂಕ್ತ ಸಲಹೆ ಮಾಹಿತಿ ಹಾಗೂ ಮಾರುಕಟ್ಟೆ ಕುರಿತಂತೆ ಮಾಹಿತಿಯನ್ನು ನೀಡಲಾಗುವುದು. ವಿಸ್ತರಣಾ ಘಟಕ, ನಾಗನಹಳ್ಳಿ, ಮೈಸೂರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಮೈಸೂರು, ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು, ಆತ್ಮ ನಿರ್ವಹಣೆ ಸಂಸ್ಥೆ, ಮೈಸೂರು, ತೋಟಗಾರಿಕೆ ಕಾಲೇಜು, ಮೈಸೂರು ಮತ್ತು ಜೆಎಸ್ಎಸ್ ಕೆವಿಕೆ, ಸುತ್ತೂರು ರವರ ಸಹಯೋಗದೊಂದಿಗೆ ಈ ಅಗ್ರಿ ವಾರ್ ರೂಂ ಕೆಲಸ ನಿರ್ವಹಿಸುತ್ತಿದೆ.

ಸಲಹೆ ಸೇವೆ


ರೈತರು ಕೆವಿಕೆಯ ಅಗ್ರಿ ವಾರ್ ರೂಂಗೆ ಭೇಟಿ ನೀಡಿ ಸಲಹೆಯನ್ನು ಪಡೆದಿರುವ ಪಟ್ಟಿ


ಕ್ರಮಸಂಖ್ಯೆ ದಿನಾಂಕ ವರದಿ
1 24-30 ಮೇ 2020 images
2 01-03 ಜೂನ್ 2020 images
3 04-08 ಜೂನ್ 2020 images
4 09-13 ಜೂನ್ 2020 images
5 14-17 ಜೂನ್ 2020 images
6 18-24 ಜೂನ್ 2020 images
7 25-30 ಜೂನ್ 2020 images
8 01-05 ಜುಲೈ 2020 images
9 06-12 ಜುಲೈ 2020 images
10 03-19 ಜುಲೈ 2020 images
11 20-26 ಜುಲೈ 2020 images
12 27ನೆಯ ಜುಲೈ 2020 ರಿಂದ 2ನೆಯ ಆಗಸ್ಟ್ 2020 images

ಅಗ್ರಿ ವಾರ್ ರೂಂ ನಿಂದ ರೈತರಿಗೆ ನೀಡಲಾದ ವಿಡೀಯೋ ಸಮ್ಮೇಳದ ಪಟ್ಟಿ


ಆಗ್ರಿ ವಾರ್ ರೂಂ ವತಿಯಿಂದ ವಿಡೀಯೋ ಸಮ್ಮಳನವನ್ನು ರೈತರಿಗೆ ಹಮ್ಮಿಕೊಂಡಿದ್ದು ಈ ಸಮ್ಮೇಳನದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವಿಸ್ತರಣಾ ಘಟಕ, ನಾಗನಹಳ್ಳಿ, ಮೈಸೂರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಮೈಸೂರು, ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು, ಆತ್ಮ ನಿರ್ವಹಣೆ ಸಂಸ್ಥೆ, ಮೈಸೂರು, ತೋಟಗಾರಿಕೆ ಕಾಲೇಜು, ಮೈಸೂರು ಮತ್ತು ಜೆಎಸ್ಎಸ್ ಕೆವಿಕೆ, ಸುತ್ತೂರು ಸಂಸ್ಥೆಗಳ ವಿಷಯತಜ್ಞರುಗಳು ಭಾಗವಹಿಸಿ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ.

ಕ್ರಮ ಸಂಖ್ಯೆ ದಿನಾಂಕ ವಿಷಯ ಸಂಪನ್ಮೂಲ ವ್ಯಕ್ತಿ
1 10.06.2020 ತೋಟಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆ ಸಂರ್ಪಕ ಮತ್ತು ಪರ್ಯಾಯ ಅವಕಾಶಗಳು ಶ್ರೀ ಬಿ.ಎಸ್. ಹರೀಶ್, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ಕಾಲೇಜು, ಮೈಸೂರು
2 15.06.2020 ಸಮಸ್ಯಾತ್ಮಕ ಮಣ್ಣುಗಳ ನಿರ್ವಹಣೆ Management of problematic soils ಶ್ರೀ ಜೆ.ಜಿ. ರಾಜಣ್ಣ, ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ), ಜೆಎಸ್ಎಸ್ ಕೆವಿಕೆ, ಸುತ್ತೂರು
3 19.06.2020 ಕೃಷಿ ಸಾಲ ನಿರ್ವಹಣೆ ಡಾ. ಕೆಶವಮೂರ್ತಿ, ನಿವೃತ್ತ ಬ್ಯಾಂಕ್ ಅಧಿಕಾರಿ
4 25.06.2020 ಮೆಕ್ಕೆ ಜೋಳದಲ್ಲಿ ಸೈನಿಕ ಹುಳು ನಿರ್ವಹಣೆ ಡಾ. ವಿಜಯಕುಮಾರ್, ಸಹ ಪ್ರಾಧ್ಯಾಪಕರು, ವಿಸಿಫಾರಂ, ಮಂಡ್ಯ
5 29.06.2020 ಸಸ್ಯಗಳಲ್ಲಿ ಹೊಸ ಶೀಲಿಂಧ್ರ ನಾಶಕ ರೋಗಗಳ ನಿರ್ವಹಣೆ ಶ್ರೀ ಬಿ.ಎಸ್. ಹರೀಶ್, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ಕಾಲೇಜು, ಮೈಸೂರು
6 03.07.2020 2020ರ ಮುಂಗಾರು ಹಂಗಾಮಿಗಾಗಿ ಸುಸ್ಥಿರ ಭತ್ತದ ತಳಿಗಳು ಡಾ. ಎಂ.ಪಿ. ರಾಜಣ್ಣ, ಭತ್ತ ತಳಿ ಸಂಶೋಧಕರು, ವಿಸಿ ಫಾರಂ, ಮಂಡ್ಯ
7 07.07.2020 ಶುಂಠಿ ಬೆಳೆಯಲ್ಲಿ ರೋಗ ನಿರ್ವಹಣೆ ಡಾ. ವೆಂಕಟೇಶ್, ಡೀನ್, ಕೃಷಿ ಕಾಲೇಜು, ವಿ.ಸಿ.ಫಾರಂ, ಮಂಡ್ಯ
8 09.07.2020 ನಬಾರ್ಡ್ ಬ್ಯಾಂಕ್ ನಿಂದ ಸಿಗುವ ಸೌಲಭ್ಯಗಳು ಶ್ರೀ ಮಣಿಕಂಠನ್, ಜಿಲ್ಲಾ ಅಭಿವೃದ್ಧಿ ಮ್ಯಾನೇಜರ್, ಮೈಸೂರು

ನಿರ್ದೇಶಕರು, ಐಸಿಎಆರ್-ಅಟಾರಿ, ಬೆಂಗಳೂರು ರವರು ಅಯೋಜಿಸಿದ ವಿಡೀಯೋ ಸಮ್ಮೇಳನ


ನಿರ್ದೇಶಕರು, ಐಸಿಎಆರ್-ಅಟಾರಿ, ಬೆಂಗಳೂರು ರವರು ಅಯೋಜಿಸಿದ ವಿಡೀಯೋ ಸಮ್ಮೇಳನ ಕಾರ್ಯಕ್ರಮ ಪಟ್ಟಿ

ಕ್ರಮಸಂಖ್ಯೆ ದಿನಾಂಕ ವಿವರ
1 13 ಏಪ್ರಿಲ್ 2020 ಕೆವಿಕೆ ಮುಖ್ಯಸ್ಥರ ವಿಡೀಯೋ ಸಮ್ಮೇಳನ
2 08 ಮೇ 2020 ಕರ್ನಾಟಕ ಕೆವಿಕೆಯ ಮುಖ‍್ಯಸ್ಥರ ವಿಡೀಯೋ ಸಮ್ಮೇಳನ
3 27-28 ಮೇ 2020 ವಾರ್ಷಿಕ ವರದಿ ಸಮೀಕ್ಷೆ ಮತ್ತು ಕ್ರಿಯಾ ಯೋಜನೆ 2020ರ ಸಮ್ಮೇಳನ ಕೃಷಿ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಗೆ ಬರುವ ಕೆವಿಕೆಗಳಿಗೆ
4 01 ಜೂನ್ 2020 ವಾರ್ಷಿಕ ವರದಿ ಸಮೀಕ್ಷೆ ಮತ್ತು ಕ್ರಿಯಾ ಯೋಜನೆ 2020ರ ಸಮ್ಮೇಳನ ಕೃಷಿ ವಿಶ್ವವಿದ್ಯಾಲಯ, ರಾಯಚೂರು ವ್ಯಾಪ್ತಿಗೆ ಬರುವ ಕೆವಿಕೆಗಳಿಗೆ
5 03 ಜೂನ್ 2020 ವಾರ್ಷಿಕ ವರದಿ ಸಮೀಕ್ಷೆ ಮತ್ತು ಕ್ರಿಯಾ ಯೋಜನೆ 2020ರ ಸಮ್ಮೇಳನ ಕೃಷಿ ವಿಶ್ವವಿದ್ಯಾಲಯ, ಶಿವಮೊಗ್ಗ ವ್ಯಾಪ್ತಿಗೆ ಬರುವ ಕೆವಿಕೆಗಳಿಗೆ
6 13 ಜೂನ್ 2020 ಕೃಷಿ ಮಂತ್ರಿಗಳು, ಕರ್ನಾಟಕ ಸರ್ಕಾರ ಇವರೊಂದಿಗೆ ಕೆವಿಕೆಗಳ ಸಿಬ್ಬಂದಿವರ್ಗದವರೊಂದಿಗೆ ಸಂವಾದ
7 25-26 ಜೂನ್ 2020 ನೂರ್ಟ್ರಿ ಗಾರ್ಡನ್ ವಾರ್ಷಿಕ ವರದಿ ವಿಮರ್ಷೆ ಹಾಗೂ ಕ್ರಿಯಾ ಯೋಜನೆ
8 14-15 ಜುಲೈ 2020 ಕೆವಿಕೆಗಳ ವಲಯ ಕಾರ್ಯಾಗಾರ

Advisory services


The advisory services provided to the farming community

Sl. No. Month Download
1 April 2020 images
2 May 2020 images
3 June 2020 images
4 July 2020 images

Image Gallery


ಏಪ್ರಿಲ್ 2020 ರಂದು ರೈತರಿಗೆ ಮಾಹಿತಿ ಹಾಗೂ ಕೃಷಿ ಪರಿಕರಗಳನ್ನು ನೀಡಿರುವುದು

ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ದೂರವಾಣಿ ಮೂಲಕ ಕೃಷಿ ಮಾಹಿತಿ ಹಾಗೂ ಕೆವಿಕೆಗೆ ರೈತರು ಭೇಟಿ ನೀಡಿದ ಸಮಯದಲ್ಲಿ ಮಾಹಿತಿಯನ್ನು ನೀಡಲಾಯಿತು. ಇದೇ ಸಮಯದಲ್ಲಿ ನರ್ಸರಿ ಗಿಡಗಳು, ಬನಾನ ಸ್ಪೇಷಲ್, ವೆಜಿಟೆಬಲ್ ಸ್ಪೇಷಲ್, ಎರೆಹುಳುಗೊಬ್ಬರ ಹಾಗೂ ಔಷಧಿ ಮುಂತಾದ ಕೃಷಿ ಪರಿಕರಗಳನ್ನು ರೈತರಿಗೆ ನೀಡಲಾಯಿತು.


ಮೇ 2020 ರಂದು ರೈತರಿಗೆ ಮಾಹಿತಿ

ಮೇ 2020 ರಂದು ರೈತರಿಗೆ ಮಾಹಿತಿ ಹಾಗೂ ಕೃಷಿ ಪರಿಕರಗಳನ್ನು ನೀಡಿರುವುದು ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ದೂರವಾಣಿ ಮೂಲಕ ಕೃಷಿ ಮಾಹಿತಿ ಹಾಗೂ ಕೆವಿಕೆಗೆ ರೈತರು ಭೇಟಿ ನೀಡಿದ ಸಮಯದಲ್ಲಿ ಮಾಹಿತಿಯನ್ನು ನೀಡಲಾಯಿತು. ಇದೇ ಸಮಯದಲ್ಲಿ ನರ್ಸರಿ ಗಿಡಗಳು, ಬನಾನ ಸ್ಪೇಷಲ್, ವೆಜಿಟೆಬಲ್ ಸ್ಪೇಷಲ್, ಎರೆಹುಳುಗೊಬ್ಬರ ಹಾಗೂ ಔಷಧಿ ಮುಂತಾದ ಕೃಷಿ ಪರಿಕರಗಳನ್ನು ರೈತರಿಗೆ ನೀಡಲಾಯಿತು.


ಪತ್ರಿಕೆಯಲ್ಲಿ ಕೆವಿಕೆ ಸಮಾಚಾರ
ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ವಿಜ್ಞಾನಿಗಳು ರೈತರ ತಾಕಿಗೆ ಭೇಟಿ ನೀಡಿ ಅವರು ಬೆಳೆದ ಬೆಳೆಯ ಮಾಹಿತಿಯನ್ನು ಕಲೆಹಾಕಿ ಸಮೀಪದ ಮಾರುಕಟ್ಟೆಯನ್ನು ಗುರುತಿಸಿ ವಿಲೇವಾರಿ ಮಾಡಲು ಸಹಕರಿಸಲಾಯಿತು.

ಸಭೆಗಳಲ್ಲಿ ಭಾಗವಹಿಸಿರುವುದು.
 • ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ಈ ಕೆಳಕಂಡ ಆನ್ ಲೈನ್ ಮೀಟಿಂಗ್ ನಲ್ಲಿ ಭಾಗವಹಿಸಲಾಯಿತು. ದಿನಾಂಕ 13.04.2020 ರಂದು ನಿರ್ದೇಶಕರು,      ವಲಯ-11, ಬೆಂಗಳೂರು ರವರೊಂದಿಗೆ ಕೋವಿಡ್ 19ರ ಸಮಯದ ಕೆವಿಕೆಯ ಕಾರ್ಯಕ್ರಮಗಳು ಕುರಿತು ಚರ್ಚಿಸಲಾಯಿತು
 • ಪೂರ್ವಭಾವಿ ಕ್ರಿಯಾ ಯೋಜನೆ 2020-21ರ ಸಭೆಯನ್ನು ಮಂಡ್ಯಾದ ವಿ.ಸಿ. ಫಾರಂನಲ್ಲಿ ಭಾಗವಹಿಸಲಾಯಿತು. ಸದರಿ ಸಭೆಯಲ್ಲಿ ಚಾಮರಾಜನಗರ, ಮೈಸೂರು      ಹಾಗೂ ಮಂಡ್ಯ ಕೆವಿಕೆಗಳ ಮುಖ್ಯಸ್ಥರು ಭಾಗವಹಿಸಿ ತಮ್ಮ ಕ್ರಿಯಾ ಯೋಜನೆ 2020ನ್ನು ಮಂಡಿಸಿದರು.
 • ದಿನಾಂಕ 06.05.2020 ರಂದು ಸಹ ಸಂಶೋಧನಾ ನಿರ್ದೇಶಕರು, ವಿ.ಸಿ. ಫಾರಂ, ಮಂಡ್ಯ ರವರೊಂದಿಗೆ ಜೆಡ್.ಆರ್.ಇ.ಪಿ ವಲಯ 6ರ ಸಭೆಯಲ್ಲಿ ಹಿರಿಯ      ವಿಜ್ಞಾನಿ ಮತ್ತು ಮುಖ್ಯಸ್ಥರು ಹಾಗೂ ವಿಜ್ಞಾನಿ (ಬೇಸಾಯ ಶಾಸ್ತ್ರ) ರವರು ಭಾಗವಹಿಸಿದ್ದರು.
 • ದಿನಾಂಕ 07.05.2020 ರಂದು ಕಾರ್ಯನಿರ್ವಾಹಕ ಕಾರ್ಯದರ್ಶಿಗಳು, ಜೆಎಸ್ಎಸ್ ಮಹಾವಿದ್ಯಾಪೀಠ, ಮೈಸೂರು ರವರೊಂದಿಗೆ ಕೋವಿಡ್ 19ರ      ಕಾರ್ಯಸೂಚಿಗಳ ಕುರಿತು ಮಾಹಿತಿ ಪಡೆಯಲಾಗಿದೆ. ಪೂಜ್ಯಶ್ರೀಗಳವರು ಸಭೆಯ ಅಧ್ಯಕ್ಷತೆವಹಿಸಿದ್ದರು
 • ದಿನಾಂಕ 08.05.2020 ರಂದು ಬೆಂಗಳೂರಿನ ಐಸಿಎಆರ್ ಎ.ಟಿ.ಎ.ಆರ್.ಐ, ನಿರ್ದೇಶಕರು ರವರು ವಲಯ-11ರ ಕೆವಿಕೆಗಳ ಸಭೆಯನ್ನು ನಡೆಸಿ, ಕೆವಿಕೆ      ಪೋರ್ಟಲ್ ನ ಕೆವಿಕೆಯ ಸ್ಥಿತಿಗತಿಗಳ ಕುರಿತು ಪ್ರಸ್ತಾಪಿಸಿದರು. ಕ್ರಿಯಾಯೋಜನೆ 2020-21ರ ಅನುಷ್ಟಾನ ಕುರಿತು ಚರ್ಚಿಸಿದರು.
 • ದಿನಾಂಕ 26.05.2020 ರಂದು ಬೆಂಗಳೂರಿನ ಐಸಿಎಆರ್ ಎ.ಟಿ.ಎ.ಆರ್.ಐ, ನಿರ್ದೇಶಕರು ರವರು ವಲಯ-11ರ ಕೆವಿಕೆಗಳ ಸಭೆಯನ್ನು ನಡೆಸಿ, ಯೋಜನೆಯ      ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು.
 • ದಿನಾಂಕ 21-22 ಮೇ 2020 ರಂದು ಬೆಂಗಳೂರಿನ ಜಿಕೆವಿಕೆಯಲ್ಲಿ ಕೆವಿಕೆಯ 2020-21ರ ಕ್ರಿಯಾ ಯೋಜನೆ ಹಾಗೂ 2019ರ ವಾರ್ಷಿಕ ವರದಿಯನ್ನು      ಮಂಡಿಸಲಾಯಿತು.

 • ಹ್ಯಾಂಡ್ ಸಾನಿಟೈಸರ್ ತಯಾರಿಕೆ
  ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ಶ್ರೀಮತಿ ನೇತ್ರಾವತಿ ಎತ್ತಿನಮನಿ, ವಿಜ್ಞಾನಿ (ಗೃಹ ವಿಜ್ಞಾನ) ಮತ್ತು ಶ್ರೀ ಜೆ.ಜಿ. ರಾಜಣ್ಣ, ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರವರು ಹ್ಯಾಂಡ್ ಸಾನಿಟೈಸರ್, ಮಾಸ್ಕ್ ಗಳನ್ನು ಸ್ವಸಹಾಯಕ ಗುಂಪು ಜೊತೆಗೂಡಿ ತಯಾರಿಸಿ ಕೆವಿಕೆಯ ಸಿಬ್ಬಂದಿವರ್ಗದರಿಗೆ ಹಾಗೂ ಸುತ್ತೂರಿನ ಜೆಎಸ್ಎಸ್ ಅಂಗ ಸಂಸ್ಥೆಗಳಿಗೆ ನೀಡಲಾಯಿತು.

  ಕೆವಿಕೆಯ ಪ್ರಾತ್ಯಕ್ಷಿಕಾ ಕ್ಷೇತ್ರದ ಕಾರ್ಯಚಟುವಟಿಕೆಗಳು

  ಹಲಸಂದೆ ಸ್ಥಳೀಯ ತಳಿಯನ್ನು ಕೆವಿಕೆಯ ಪ್ರಾತ್ಯಕ್ಷಿಕಾ ಕ್ಷೇತ್ರದಲ್ಲಿ ಬಿತ್ತಲಾಯಿತು.

  The Host Organization JSS Mahavidyapeetha, Mysuru initiative to combat Corona.

  ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: