2010ರ ಉತ್ತಮ ವಲಯ ಕೆವಿಕೆ ಪ್ರಶಸ್ತಿಯನ್ನು ಪಡೆದ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ


ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರಿಂದ ಆರ್ಶೀವಾದದಿಂದ ಪೋಷಿಸಲ್ಪಡುತ್ತಿರುವ ಸಂಸ್ಥೆಯಾಗಿದೆ. ಸದರಿ ಕೆವಿಕೆಯು ಭಾರತೀಯ ಕೃಷಿ ಅನುಸಂಧಾನ ಪರಿಷತ್ ವತಿಯಿಂದ ನೀಡುವ ವಲಯ ಉತ್ತಮ ಕೆವಿಕೆ (ವಲಯ 8) ಪ್ರಶಸ್ತಿಗೆ 2009-10ನೆಯ ಸಾಲಿಗೆ ಭಾಜನವಾಗಿದೆ.

ವಲಯ 8 ರಡಿಯಲ್ಲಿ ಕರ್ನಾಟಕ, ಗೋವಾ, ತಮಿಳುನಾಡು, ಕೇರಳ ರಾಜ್ಯಗಳು ಹಾಗೂ ಪುದುಚೇರಿ ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳು ಸೇರಿವೆ. ಈ ವಲಯದಲ್ಲಿ ಒಟ್ಟು 78 ಕೆವಿಕೆಗಳು ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ಐಸಿಎಆರ್ ಜೆಎಸ್ಎಸ್ ಕೆವಿಕೆಯು ಒಂದಾಗಿದೆ.

ಐಸಿಎಆರ್ ಜೆಎಸ್ಎಸ್ ಕೆವಿಕೆಯು 1994ರಲ್ಲಿ ಸ್ಥಾಪಿತವಾಗಿದೆ. ಕೆವಿಕೆಯ ಮಾತೃಸಂಸ್ಥೆ ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠವಾಗಿದೆ. ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಈ ಪ್ರತಿಷ್ಟಿತ ಪ್ರಶಸ್ತಿಯನ್ನು ರೈತರ ಏಳಿಗೆಗಾಗಿ ಹಾಗೂ ಗ್ರಾಮೀಣಭಿವೃದ್ದಿಗಾಗಿ ಶ್ರಮಿಸುತ್ತಿರುವ ಕಾರಣಕ್ಕಾಗಿ ಐಸಿಎಅರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರಕ್ಕೆ ನೀಡಲಾಗಿದೆ. ಕೃಷಿ ತಂತ್ರಜ್ಞಾನ ಪರಿಶೀಲನೆ, ಪ್ರಾತ್ಯಕ್ಷಿಕೆಗಳು, ತರಬೇತಿಗಳು ಮತ್ತು ಕೃಷಿ ವಿಸ್ತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಕ್ಕಾಗಿ ಹಾಗೂ ಬೀಜ ಗ್ರಾಮ ಕಾರ್ಯಕ್ರಮ ಮತ್ತು ಸುತ್ತೂರು ಜಾತ್ರಾ ಸಮಯದಲ್ಲಿ ಪ್ರತಿ ವರ್ಷ ಕೃಷಿಮೇಳ ಆಯೋಜನೆ ಸಹ ಸೇರಿದೆ.

ಪ್ರಶಸ್ತಿಯನ್ನು ಕೇಂದ್ರದ ಕೃಷಿ ಮಂತ್ರಾಲಯದ ಸಚಿವಾರಾದ ಶ್ರೀ ಶರದ್ ಪವಾರ್ ರವರು 6ನೆಯ ರಾಷ್ಟ್ರೀಯ ಕೆವಿಕೆಗಳ ಸಮ್ಮೇಳನದಲ್ಲಿ ನೀಡಿದರು. ಸದರಿ ಸಮ್ಮೇಳನವು ಮಧ್ಯಪ್ರದೇಶದ ಜಬಲ್ಪುರದ ಜೆ.ಎನ್.ಕೆ.ವಿ.ವಿ ಅವರಣದಲ್ಲಿ ದಿನಾಂದ 3-5 ಡಿಸೆಂಬರ್ 2011 ರಲ್ಲಿ ಜರುಗಿತು. ಪ್ರಶಸ್ತಿಯನ್ನು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ಡಾ. ಅರುಣ್ ಬಳಮಟ್ಟಿಯವರು ಕೇಂದ್ರ ಸಚಿವರಿಂದ ಸ್ವೀಕರಿಸಿದರು.

ಕೃಷಿ ವಸ್ತು ಪ್ರದರ್ಶನವನ್ನು ಸಹ ಇದೇ ಸಮಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಹಾಗೂ ವಲಯ ಪ್ರಶಸ್ತಿ ಪಡೆದ ಕೆವಿಕೆಗಳು ಕೃಷಿ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದವು. ಪ್ರದರ್ಶನದ ಮುಖ್ಯ ವಿಷಯವು ಕೊಯ್ಲೋತ್ತರ ಕೃಷಿಯಾಗಿತ್ತು.

600 ಕೆವಿಕೆಗಳ ಕಾರ್ಯಕ್ರಮ ಸಂಯೋಜಕರು, ವಿಷಯ ತಜ್ಞರುಗಳು ಮತ್ತು ವಿಜ್ಞಾನಿಗಳು 3 ದಿನಗ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಶ್ರೇಷ್ಠ ಕೃಷಿ ವಿಜ್ಞಾನಿಗಳು ಕೊಯ್ಲೋತ್ತರ ಕೃಷಿಯ ಕುರಿತು ಸಂಶೋಧನೆಯ ಪ್ರಬಂಧವನ್ನು ಮಂಡಿಸಿದರು. ಮುಖ್ಯವಾಗಿ ರೈತರ ಆದಾಯವನ್ನು ಹೆಚ್ಚಿಸುವ ಕೊಯ್ಲೋತ್ತರ ಕೃಷಿ ನಿರ್ವಹಣೆ, ಮೌಲ್ಯವರ್ಧನೆ, ಉತ್ಪನ್ನಗಳ ಪ್ಯಾಕಿಂಗ್, ಮಾರ್ಕೆಟಿಂಗ್ ಮತ್ತು ಕೃಷಿ ಉತ್ಪನ್ನಗಳ ರಫ್ತು ಸೇರಿತ್ತು.

ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: