ನಮ್ಮ ಬಗ್ಗೆ


ಜೆಎಸ್ಎಸ್ ಕೆವಿಕೆಗೆ ಸ್ವಾಗತ

ಗ್ರಾಮೀಣ ಪ್ರದೇಶದ ನಾಡಿಮಿಡಿತವನ್ನರಿತ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಅಭಿವೃದ್ಧಿಗಾಗಿ 1994ರಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವನ್ನು ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಸ್ಥಾಪಿಸಿದರು. ಈ ಕೇಂದ್ರವು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅನುದಾನದಲ್ಲಿ ನಡೆಯುತ್ತಿದೆ. ಕೃಷಿಕರಿಗೆ ನವೀನ ತಂತ್ರಜ್ಞಾನಗಳನ್ನು ಪ್ರಯೋಗ, ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಮುಖಾಂತರ ಪರಿಚಯಿಸಿ, ಅವುಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿ ರೈತರ ಅರ್ಥಿಕ ಹಾಗೂ ಸಾಮಾಜಿಕ ಸ್ಥಿತಿ-ಗತಿಗಳನ್ನು ಉತ್ತಮಗಳಿಸುವುದು ಈ ಕೇಂದ್ರದ ಮುಖ್ಯ ಉದ್ಧೇಶ.

ಕಾರ್ಯವ್ಯಾಪ್ತಿ

ಮೈಸೂರು ಜಿಲ್ಲೆಯು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯವ್ಯಾಪ್ತಿಯಾಗಿದ್ದು, ಒಣ (ವಲಯ-8) ಮತ್ತು ಅರೆ ಮಲೆನಾಡು (ವಲಯ-7) ವಲಯಗಳನ್ನು ಹೊಂದಿದೆ. ಜಿಲ್ಲೆಯ ಭೌಗೋಳಿಕ ವಿಸ್ತೀರ್ಣವು 3.84 ಲಕ್ಷ ಹೇಕ್ಟೇರ್. ಒಟ್ಟು ಸಾಗುವಳಿಯ ಶೇ. 30ರಷ್ಟು ಪ್ರದೇಶವು ಕಾಲುವೆ ನೀರಾವರಿ ಸೌಲಭ್ಯ ಹೊಂದಿದ್ದು, ಭತ್ತ ಪ್ರಮುಖವಾದ ಬೆಳೆಯಾಗಿದೆ. ಜಿಲ್ಲೆಯ ಸರಾಸರಿ ಮಳೆಯ ಪ್ರಮಾಣ 782 ಮಿ.ಮಿ. ಮರಳು ಮಿಶ್ರೀತ ಕೆಂಪು ಮಣ್ಣು ಮತ್ತು ಕಡಿಮೆ ಆಳದ ಕಪ್ಪು ಮಣ್ಣು ಈ ಪ್ರದೇಶದ ಮಣ್ಣಿನ ಗುಣಧರ್ಮ. ಭತ್ತದ ನಂತರ ಹತ್ತಿ, ಕಬ್ಬು, ಹೊಗೆಸೊಪ್ಪು, ರಾಗಿ, ಉದ್ದು, ಅಲಸಂದೆ, ತೊಗರಿ, ಹುರಳಿ, ನೆಲೆಗಡಲೆ, ಎಳ್ಳು, ಹರಳು, ಪ್ರಮುಖ ಬೆಳೆಗಳು, ತೋಟಗಾರಿಕೆ ಬೆಳೆಗಳಲ್ಲಿ ತೆಂಗು, ಬಾಳೆ, ಅರಿಶಿನ, ಶುಂಠಿ, ಟೋಮ್ಯಾಟೋ, ಬದನೆ, ಮೆಣಸಿನಕಾಯಿ, ಕಲ್ಲಂಗಡಿ ಪ್ರಮುಖವಾದವುಗಳು. ರೇಷ್ಮೆ ಕೃಷಿಯು ಈ ಜಿಲ್ಲೆಯ ಮತ್ತೋಂದು ವೈಶಿಷ್ಟ್ಯ.

  • ಸ್ಥಳೀಯವಾಗಿ ಸೂಕ್ತವಾಗುವ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಹಾಗೂ ಜೀವವೈವಿಧ್ಯಗಳ ಸುಸ್ಥಿರ ಬಳಕೆ ಹಾಗೂ ಸಂರಕ್ಷಣೆಗೆ ಒತ್ತುಕೊಡುವ ಕೃಷಿ ಭೂ ಬಳಕೆ ವ್ಯವಸ್ಥೆಗೆ ಸೂಕ್ತ ತಂತ್ರಜ್ಞಾನವನ್ನು ಗುರುತಿಸಲು ರೈತರ ತಾಕುಗಳಲ್ಲಿ ತಂತ್ರಜ್ಞಾನ ಪರೀಕ್ಷೆಗಳನ್ನು ನಡೆಸುವುದು
  • ಕೃಷಿ ಉತ್ಪಾದಕತೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಬೆಳೆ ಪದ್ಧತಿಯಲ್ಲಿ ಕ್ಷೇತ್ರಮಟ್ಟದಲ್ಲಿ ಪ್ರಯೋಗ ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು
  • ಕೃಷಿ ಸಂಶೋಧನೆಯ ನವನವೀನ ತಂತ್ರಜ್ಞಾನಗಳ ಬಗ್ಗೆ ರೈತರು, ಯುವಕರು, ಮಹಿಳೆಯರು ಹಾಗೂ ವಿಸ್ತರಣಾ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು
  • ಅಧಿಕ ಉತ್ಪಾದನೆಗೆ ಮತ್ತು ಸ್ವ-ಉದ್ಯೋಗಕ್ಕೆ (ಕೃತಿಯಿಂದ ಕಲಿಕೆಯ ಬಗ್ಗೆ) ಒತ್ತು ನೀಡಿ ರೈತರಿಗೆ ಹಾಗೂ ಗ್ರಾಮೀಣ ಯುವಕರಿಗೆ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಅಲ್ಪಾವಧಿ ಹಾಗೂ ಧೀರ್ಘಾವಧಿ ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
  • ಉತ್ತಮ ಗುಣಮಟ್ಟದ ಬೀಜ, ಸಸಿಗಳು, ಜೈವಿಕ ಉತ್ಪನ್ನಗಳನ್ನು ಸಕಾಲದಲ್ಲಿ ಒದಗಿಸುವುದು.
ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: