ಕೃಷಿಮೇಳ


ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿಮೇಳವನ್ನು ಆರು ದಿನಗಳ ಸಂಭ್ರಮದ ಕೃಷಿ ಹಬ್ಬವಾಗಿ ಆಚರಿಸಲಾಗುವುದು. ಕೃಷಿ ಕ್ಷೇತ್ರದಲ್ಲಿನ ಪ್ರಮುಖ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಲು ಕಳೆದ ಹಲವಾರು ವರ್ಷಗಳಿಂದ ಕೃಷಿಮೇಳವನ್ನು ನಡೆಸಲಾಗುತ್ತಿದೆ. ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಕೃಷಿಮೇಳವನ್ನು ಪ್ರತಿ ವರ್ಷ ಆಯೋಜನೆ ಮಾಡುತ್ತಿವೆ. ಅದೇ ರೀತಿಯಾಗಿ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ಪ್ರತಿವರ್ಷ ಅನೇಕ ವಿಧಗಳಲ್ಲಿ ವಿಶಿಷ್ಟವಾದ ಕೃಷಿ ಮೇಳವನ್ನು ಆಯೋಜನೆ ಮಾಡುತ್ತಿದೆ. ಸರ್ವತೋಮುಖ ಗ್ರಾಮೀಣಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜಾನಪದ ಕಲೆ, ಸಂಪ್ರದಾಯ, ಸಂಸ್ಕೃತಿ ಹಬ್ಬ ಮತ್ತು ಸಂಗೀತವನ್ನು ಪೋಷಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಸುತ್ತೂರು ಮಠದಿಂದ ಪ್ರತಿ ವರ್ಷ ಜಾತ್ರೆಯನ್ನು ಆಯೋಜಿಸುವ ಮೂಲಕ ಶ್ರೀ ಕ್ಷೇತ್ರ ಸುತ್ತೂರು ಮಠದ (ಮೈಸೂರು ನಗರದಿಂದ 30 ಕಿ ಮೀ ದೂರದಲ್ಲಿರುವ) ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಭಗವದ್ಪಾರವರಿಗೆ ಗೌರವ ಸಲ್ಲಿಸಲಾಗುತ್ತಿದೆ.

ಮೈಸೂರಿನಲ್ಲಿರುವ ಜೆಎಸ್ಎಸ್ ಮಹಾವಿದ್ಯಾಪೀಠವು ಸರ್ಕಾರೇತರ ಸಂಸ್ಥೆಯಾಗಿದ್ದು, ಶ್ರೀ ಕ್ಷೇತ್ರ ಸುತ್ತೂರು ಮಠದಿಂದ ಸ್ಥಾಪಿತವಾಗಿದೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲಭೂತವೆಂದು ನಂಬಿರುವ ಜೆಎಸ್ಎಸ್ ಮಹಾವಿದ್ಯಾಪೀಠವು ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿದೆ. ಜೆಎಸ್ಎಸ್ ಮಹಾವಿದ್ಯಾಪೀಠವು ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಂಯೋಜಿಸಲು ಪ್ರದರ್ಶನ, ಜಾತ್ರೆ, ಸಿಂಪೋಸಿಯಾ, ಸೆಮಿನಾರ್, ಕಾರ್ಯಾಗಾರ ಮತ್ತು ಕಾನ್ಫರೆನ್ಸ್ ಗಳನ್ನು ಆಯೋಜಿಸಲಾಗುವುದು.

ಆರು ದಿನಗಳ ಜಾತ್ರೆಯು ಏಕತೆಯ ಭಾಗವಾಗಿದ್ದು, ಬೆಳೆ (ಪ್ರತ್ಯಕ್ಷ) ಮತ್ತು ತಂತ್ರಜ್ಞಾನಗಳ ಪ್ರದರ್ಶನ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿಸ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಾರ್ಯಾಗಾರವನ್ನು ಏರ್ಪಡಿಸುವುದು ಇದರ ಜೊತೆಗೆ ಕೃಷಿ ಮತ್ತು ತೋಟಗಾರಿಕೆ ಪ್ರದರ್ಶನ, ಹೂವುಗಳ ಪ್ರದರ್ಶನ, ದನಗಳ ಜಾತ್ರೆ, ಕೃಷಿ ಪರಿಕರಗಳು ಮತ್ತು ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟವೂ ಸೇರಿರುವುದು. ವಿಶೇಷ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಗುವುದು.

  • ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ: ಸುಮಾರು 10 ವರ್ಷಗಳಿಂದ ಕೆವಿಕೆಯು ಒಂದು ಎಕರೆಯಲ್ಲಿ ಸಮಗ್ರ ಕೃಷಿ ಪದ್ಧತಿಯ ಕೃಷಿ ಬ್ರಹ್ಮಾಂಡವನ್ನು ನಿರ್ಮಿಸುತ್ತ ಬಂದಿದೆ. ಸಣ್ಣ ಮತ್ತು ಅತಿ ಸಣ್ಣ ರೈತರ ಸುಸ್ಥಿರ ಜೀವನೋಪಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಲಾನಯನ ತತ್ವಗಳು ಮತ್ತು ಉತ್ತಮ ಬೇಸಾಯ ಕ್ರಮಗಳನ್ನು ಅನುಸರಿಸಿ ಹೆಚ್ಚು ಖರ್ಚಿಲ್ಲದ ಸಮಗ್ರ ಕೃಷಿ ಮಾದರಿಯೊಂದನ್ನು ಅಭಿವೃದ್ಧಿ ಪಡಿಸುವುದು ಮುಖ್ಯ ಉದ್ಧೇಶವಾಗಿದೆ. ಈ ಮಾದರಿಯು ಒಂದು ಎಕರೆಯಲ್ಲಿ 108 ವಿವಿಧ ಬೆಳೆಗಳು ಮತ್ತು 4 ಬೇರೆ ಬೇರೆ ಉದ್ಯಮಗಳನ್ನು ಒಳಗೊಂಡಿದೆ. ಸಂತುಲಿತ ಮತ್ತು ಸಮಗ್ರ ಆಹಾರದ ಅವಿಭಾಜ್ಯ ಅಂಗಗಳಾದ ಏಕದಳ ಧಾನ್ಯಗಳು ಜೊತೆಗೆ ವಿದೇಶಿ ಆಹಾರಗಳಾದ ಚಿಯಾ, ಕ್ವಿನೊವಾ ಮತ್ತು ಟೆಫ್, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು ಕೃಷಿ ಆದಾಯದ ಮೂಲಗಳಾದ ವಾಣಿಜ್ಯ ಬೆಳೆಗಳು, ತರಕಾರಿಗಳು, ಔಷದೀಯ ಸಸ್ಯಗಳು ಮತ್ತು ಮೇವಿನ ಬೆಳೆಗಳನ್ನು ಬೆಳೆಯಲಾಗುತ್ತದೆ. ಇದರ ಜೊತೆಗೆ ಉಪಕಸುಬುಗಳಾದ ಹೈನುಗಾರಿಕೆ, ಎರೆಗೊಬ್ಬರ, ಅಜೋಲಾ ಘಟಕ ಹಾಗೂ ಮೀನುಗಳನ್ನು ಹೊಂದಿರುವ ಕೃಷಿ ಹೊಂಡವನ್ನು ಒಳಗೊಂಡಿದೆ.
  • ಕೃಷಿ ಕಾರ್ಯಾಗಾರ: ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಪ್ರತಿ ವರ್ಷ ಸುತ್ತೂರು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗುವುದು. ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಗತಿ ಪರ ರೈತರನ್ನು ಹಾಗೂ ಕೃಷಿ ತಂತ್ರಜ್ಞರನ್ನು ಆಹ್ವಾನಿಸಿ ಅವರ ಅನುಭವಗಳು ಮತ್ತು ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಲಾಗುವುದು. ಇದೇ ಸಮಯದಲ್ಲಿ ರೈತರಿಗೆ ಹೊಸ ಬೆಳೆಗಳು, ತಳಿಗಳು, ತಂತ್ರಜ್ಞಾನಗಳು ಮತ್ತು ಕೃಷಿ ಉತ್ಪನ್ನಗಳ ಪರಿಚಯವಾದರೆ ಕೆವಿಕೆಯ ಸಿಬ್ಬಂದಿಗಳಿಗೆ ‘ಮಾಡುವ ಮೂಲಕ ಕಲಿಕೆ’ ಯ ಅನುಭವವಾಗುವುದು, ಮಕ್ಕಳಿಗೆ ಬೆಳೆ ಮತ್ತು ಜೀವ ವೈವಿದ್ಯಮದ ಕಲಿಕೆಯಾಗುವುದು ಜೊತೆಗೆ ನಗರ ವಾಸಿಗಳಿಗೆ ಕೃಷಿಯಲ್ಲಿ ಆಸಕ್ತಿ ಉಂಟಾಗುವುದು. ಇದಲ್ಲದೆ ಜನಪ್ರತಿನಿಧಿಗಳು ಮತ್ತು ಧಾರ್ಮಿಕ ನಾಯಕರಿಗೆ ಕೃಷಿ ಬಗ್ಗೆಯಿರುವ ಕಾಳಜಿ ಮತ್ತು ಆಸಕ್ತಿಯನ್ನು ವ್ಯಕ್ತಪಡಿಸಲು ಈ ಕೃಷಿಮೇಳವು ವೇದಿಕೆಯಾಗುವುದು. ಈ ರೀತಿಯಾಗಿ ಕೆವಿಕೆಯು ತನ್ನ ದೃಶ್ಯತೆ (ಇರುವಿಕೆ) ಯನ್ನು ಮೈಸೂರು ಜಿಲ್ಲೆ ಮತ್ತು ಅದರಾಚೆಗೂ ಬಲಪಡಿಸುತ್ತಿದೆ. ಈ ಮೇಳವು ರೈತರನ್ನು ಉತ್ತೇಜಿಸುವುದಲ್ಲದೆ ರೈತರಿಗೆ ಯಶಸ್ವಿ ಮತ್ತು ಸುಸ್ಥಿರ ಕೃಷಿಯಲ್ಲಿ ವಿಶ್ವಾಸ ಮೂಡಲು ಸಹಕಾರಿಯಾಗಿದೆ.
  • ತೋಟಗಾರಿಕೆ ಬೆಳೆಗಳ ವಿಭಾಗ: ವಿವಿಧ ರೀತಿಯ ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಒಂದು ಎಕರೆಯಲ್ಲಿ ಬೆಳೆಯಲಾಗುತ್ತದೆ. ಬೆಳೆ ವೈವಿದ್ಯತೆಯು ವಿವಿಧ ಸ್ವದೇಶೀ ಹಾಗೂ ವಿದೇಶಿ (ಲೆಟ್ಯೂಸ್, ಪಾಕ್ಚಾಯ್, ಚೈನಿಜ್ ಕ್ಯಾಬೆಜ್) ತರಕಾರಿಗಳನ್ನೊಳಗೊಂಡ 60 ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು ಒಳಗೊಂಡಿದೆ. ಜೊತೆಗೆ ಮೈಸೂರಿನ ಸಾಂಪ್ರದಾಯಿಕ ಬೆಳೆಗಳಾದ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಈರನಗೇರೆ ಬದನೆ ಹಾಗೂ ಮೈಸೂರು ಚಿಗುರೆಲೆ ಗಳನ್ನು ಸಹ ಬೆಳೆದು ಪ್ರದರ್ಶಿಸಲಾಗುತ್ತದೆ.
  • ಪಶು ಸಂಗೋಪನೆ ಪ್ರದರ್ಶನ: ಕೃಷಿಮೇಳದಲ್ಲಿ ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳ ರೈತರು ಹಸು, ಎತ್ತು, ಕುರಿ ಮತ್ತು ಆಡುಗಳನ್ನು ಪ್ರದರ್ಶಿಸುವರು. ಹಸುವಿನ ತಳಿಗಳಾದ ದೇವನಿ, ಸಾಯಿವಾಲ್, ಹಳ್ಳಿಕಾರ್, ಗಿರ್, ಹಾಗೂ ಆಡಿನ ತಳಿಗಳಾದ ಜಲ್ವಾಡಿ, ಸಿರೋಹಿ ಮತ್ತು ಜಮ್ನಾಪರಿ ಅಲ್ಲದೆ ಬಂಡೂರು ಕುರಿ ಮತ್ತು ಅಲಂಕಾರಿಕ ಮೀನುಗಳ ಪ್ರದರ್ಶನದ ವ್ಯವಸ್ಥೆ ಇರುತ್ತದೆ.
  • ಕೃಷಿ ವಸ್ತು ಪ್ರದರ್ಶನ ಹಾಗೂ ಕೃಷಿ ಯಂತ್ರೋಪಕರಣಗಳು: ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಮತ್ತು ಇತರರಿಗಾಗಿ 100 ಕ್ಕೂ ಅಧಿಕ ಸುಸಜ್ಜಿತ ಮಳಿಗೆಗಳ ವ್ಯವಸ್ಥೆ ಮಾಡಲಾಗುವುದು. ಬೀಜಗಳು, ರಸಗೊಬ್ಬರಗಳು, ಕೀಟ ಮತ್ತು ರೋಗ ನಿರ್ವಹಣೆಯ ತಂತ್ರಜ್ಞಾನಗಳು, ಕೃಷಿ ಪರಿಕರಗಳು, ಉತ್ಪನ್ನಗಳು ಮತ್ತು ಬೆಳೆಗಳ ಮಾರುಕಟ್ಟೆ ಬಗ್ಗೆ ಮಾಹಿತಿಗಳನ್ನು ಕೃಷಿ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಕೆ, ರೇಷ್ಮೆ ಹೀಗೆ ವಿವಿಧ ಅಭಿವೃದ್ಧಿ ಇಲಾಖೆಗಳು, ಜಿಲ್ಲಾ ಪಂಚಾಯತ್, ಖಾಸಗಿ ಸಂಸ್ಥೆಗಳು ಮತ್ತು ಸ್ವ ಸಹಾಯ ಸಂಘಗಳು ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸಲು ಮಳಿಗೆಗಳನ್ನು ಒದಗಿಸಿಕೊಡಲಾಗುವುದು.

ಉದ್ಘಾಟನೆ

ನೈಜ ಬೆಳೆ ಪ್ರಾತ್ಯಕ್ಷಿಕೆ

ಪಶು ಸಂಗೋಪನೆ ಘಟಕ

ಒಂದು ಎಕರೆ ಪ್ರಾತ್ಯಕ್ಷಿಕೆ

ಕೃಷಿ ಗೋಷ್ಟಿ

ಕೃಷಿ ವಸ್ತುಪ್ರದರ್ಶನ

ಸೋಬಾನೆ ಪದ, ರಂಗೋಲಿ ಮತ್ತು ಅಡುಗೆ ಸ್ಪರ್ಧೆ

ಕೃಷಿಮೇಳ ವಿಡಿಯೋ ಸಂಪುಟ

ಬೆಳೆ ಪಟ್ಟಿ


Sl. No. Flower Crops Fruits &
Vegetables
Indigenous crops Medicinal and Aromatic Kitchen garden Pulse Crops Oilseed Crops Crops Plantation crops Leafy vegetables Fodder crops Exotic Crops Demos
1. Marigold Mango (Badami) Hrave soppu Insulin Tomato Chickpea (JG 11) Sunflower (Dhara) Maize (5404) Coconut Spinach Sampoorna (DHN-6) Teff Trenching and Mulching in Mulberry Cultivation
2. Zinnia Sapota (Cricket ball) Finger Millet (Dodda thene) Brahmi Chilli Green Gram (China mung) Soybean (Local) Maize (5109) Neem Dill Napier Grass (Co 4) Quinoa Vermicompost Production Unit
3. Balsam Lime (Kagzi) Finger Millet (Kari thene) Lemon Grass Brinjal Black Gram (T-9) Groundnut (Kadri-6) Jowar (Hi-tech 3201) Agathi Amaranthus (Red) Guinea Grass Chia Azolla Production Unit
4. Nandi batlu Citron Kasturi methi Henna Drumstick (Bhagya) Black Gram (LBG-791) Mustard (Small) Wheat (Local) Bamboo Coriander Marvel Grass - Farm House
5. Cosmos Pomegranate Methi Mango Ginger Capsicum Black Gram (Nirmala) Mustard (Medium size) Sugarcane + French bean Silver Oak Methi Fodder sorghum + Fodder Cow pea - Farm Pond
6. Antirrhinum (Liberty Mix) Ridge gourd (Naga) Mustard (Local) Amruthaballi Bhendi Black Gram (LBG-625) Niger (Local) Bajra (Local) Casurina Chakkotha soppu Fodder sorghum + Fodder Cow pea - -
7. Aster (Tall Mix) Ridge gourd (Varsha) Mustard (Yellow) Basil Cabbage (Red) Cowpea (C-152) Sesamum-Black (Local) Finger Millet (KMR 301) Sandal wood - - - -
8. Balsam (Tom Thumb Mix) Bitter gourd (Palee) Finger Millet (Chicka thene) Aloe vera Knol Khol Cowpea - White (Local) Sesamum-White (Local) Foxtail Millet (Local) Agave - - - -
9. Calendula (Pacific Beauty) Bitter gourd (Maya) Spinach (Local) Beetle vine Radish Peas (Local) Linseed / Flax (Local) Little Millet (Local) Glyricidia - - - -
10. Calendula (Bon Bon Mix) Bitter gourd (616) Chickpea (Local) Hippali Carrot Horse Gram-Brown (Local) Grain Amaranthus (White) Proso Millet (Local) Subabul - - - -
11. Celosia - Plumos (Kimono Salmon) Snake gourd (Kovai) Black Gram (Local) Chakramuni French bean Yard Long Bean Marigold 307 (Yellow) Barn Yard Millet (Local) Nerale - - - -
12. Celosia - Plumos (Kimono Mix ) Cucumber (Jumbo) Dolichos (Local) Doddapatre Cucumber Moth Bean (Local) Marigold (Orange) - Palm - - - -
13. Celosia - Plumos (Kimono Red) Bottle gourd (Swikar 045) Horse Gram-Red (Local) Besella alba Ridge gourd Lentil-Red (Local) - - - - - - -
14. Celosia - Plumos (Kimono Scarlet ) Yard Long Bean (Fola) Green Gram (Local) Mentha Bitter gourd Dolichos (HA-4) - - - - - - -
15. Cosmos (Sensation Mix) Yard Long Bean (YL 35) Cowpea-Red (Local) Curry Leaf (Suhasini) Pumpkin - - - - - - - -
16. Chrysanthemum (White Pompon) Yard Long Bean (Nagashree) Foxtail Millet (Dodda thale) Amla Bottle gourd - - - - - - - -
17. Dahlia (Early Bird Mix) Brinjal (MEBH 10) Foxtail Millet (Chikka Navane) Maruga Snake gourd - - - - - - - -
18. Gazania (Sunshine mix) Brinjal (Lalita) Foxtail Millet (Kari Navane) Ashwagandha - - - - - - - - -
18. Hollyhock (Summer Carnival mix) Brinjal (Jamuni) Foxtail Millet (Kempu) Sarpagandha - - - - - - - - -
19. Phlox (Beauty Mix) Capsicum (Diana) Foxtail Millet (Hasiru) Avarthini - - - - - - - - -
20. Portulaca (Double Mix) Chilli (Ulka) Foxtail Millet (Kari Thale) Sariva - - - - - - - - -
21. Salvia (Salsa Mix) Chilli (US 344) Foxtail Millet (Dodda kalu) Nirgundi - - - - - - - - -
22. Vinca (Apricot) Chilli (861) Beetroot (Local) Agnimantha - - - - - - - - -
23. Vinca (White ) Chilli (Hakone) Carrot (Local) Butter Fruit - - - - - - - - -
24. Zinnia (Zahara mix ) Tomato (NS 526) Rajma (Local) Avarike - - - - - - - - -
25. Verbena (Quartz mix) Tomato (Nutan) Kidney beans (Local) Calotropis - - - - - - - - -
26. Petunia (Ultra Star Mix) Tomato (Soubhagya) Bottle gourd (Local) Arka - - - - - - - - -
27. Pansy (Twinkle mix) Tomato (Emerald) Peas-Red (Local) Akole - - - - - - - - -
28. Marigold Hybrid (Kilimanjiro White) Tomato (Cherry) Peas-White (Local) Jayapala - - - - - - - - -
29. Ipomea Mix Pole Beans (Belli) Yard Long Bean (Local) Baje - - - - - - - - -
30. Impatiens (Mega Orange Star) Cucumber (Rashmi) Bhendi (Local) Ashoka - - - - - - - - -
31. Gaillardia (Red plume) Pumpkin (Arjun) Pole beans (Local) Chitraka - - - - - - - - -
32. Marigold (Ashoka Yellow) Leeks Kodo Millet (Local) Vasa - - - - - - - - -
33. Marigold (307) Parsley (Curl) Jowar -Bili (Local) Jalabramhi - - - - - - - - -
34. Marigold (Maxima Yellow ) Amaranthus (Local) Eclipta Asthi Shunkala (Nalli) - - - - - - - - -
35. Marigold (Yellow Star) Celery Pearl Millet (White) - - - - - - - - - -
36. Marigold (African White) Lettuce -Rocket - - - - - - - - - - -
37. Marigold (910) Zuccini Yellow - - - - - - - - - - -
38. - Zuccini Green - - - - - - - - - - -
39. - Sweet Corn (Maurya) - - - - - - - - - - -
40. - Cluster bean (Local) - - - - - - - - - - -
41. - Cluster bean (Rani) - - - - - - - - - - -
42. - Bhendi (Abhay) - - - - - - - - - - -
42. - Bhendi (Akash) - - - - - - - - - - -
43. - Dolichos (HA3) - - - - - - - - - - -
43. - Dolichos (Sangeetha) - - - - - - - - - - -
44. - Broccoli (Green Magic) - - - - - - - - - - -
44. - Red Cabbage - - - - - - - - - - -
45. - French Beans (Harikot) - - - - - - - - - - -
46. - French Beans (Anup) - - - - - - - - - - -
47. - French Beans (Arka Arjun) - - - - - - - - - - -
47. - French Beans (Arka Sharath) - - - - - - - - - - -
48. - Radish (Snow White 61) - - - - - - - - - - -
49. - Lucerne - - - - - - - - - - -
ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: