ಪ್ರಾತ್ಯಕ್ಷಿಕಾ ಘಟಕಗಳು ಮತ್ತು ಲ್ಯಾಬ್
-
ಮಣ್ಣು ಪರೀಕ್ಷೆ ಲ್ಯಾಬ್
2005ರಲ್ಲಿ ಜೆಎಸ್ಎಸ್ ಕೆವಿಕೆಯು ಮಣ್ಣು ಪರೀಕ್ಷೆ ಪ್ರಯೋಗಾಲಯವನ್ನು ಪ್ರಾರಂಭಿಸಿತು. ಮಣ್ಣು ಪರೀಕ್ಷೆಯು ಪಿಹೆಚ್, ಇಸಿ, ಆರ್ಗಾನಿಕ್ ಕಾರ್ಬನ್ (OC), ಲಭ್ಯವಿರುವ ಸಾರಜನಿಕ, ರಂಜಕ ಮತ್ತು ಪೊಟ್ಯಾಷ್ಮ, ಸೂಕ್ಷ್ಮ ಪೋಷಕಾಂಶಗಳನ್ನು ಸಹ ಪರೀಕ್ಷೆ ಮಾಡಿ ಮಣ್ಣು ಆರೋಗ್ಯ ಪತ್ರವನ್ನು ನೀಡಲಾಗುವುದು.
ಪ್ರಾರಂಭ ವರ್ಷ : 2005
ವಿಸ್ತೀರ್ಣ : 15.00 ಚ.ಮಿ.
ಆರ್ಥಿಕ ಕೊಡುಗೆ
ಐಸಿಎಆರ್ : ರೂ 09.30 ಲಕ್ಷಗಳು
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀ ಜೆ.ಜಿ. ರಾಜಣ್ಣ
ಕಾರ್ಯಕ್ರಮ ಸಹಾಯಕ
94489 78836 -
ನೀರು ಪರೀಕ್ಷೆ ಲ್ಯಾಬ್
2006ರಲ್ಲಿ ಜೆಎಸ್ಎಸ್ ಕೆವಿಕೆಯು ನೀರು ಪರೀಕ್ಷೆ ಪ್ರಯೋಗಾಲಯವನ್ನು ಪ್ರಾರಂಭಿಸಿತು. ನೀರು ಪರೀಕ್ಷೆಯು ಪಿಹೆಚ್, ಇಸಿ, PH, EC, ಒಟ್ಟು ಗಡಸುತನ (TH), ಕಾರ್ಬೊನೇಟ್, ಬೈ-ಕಾರ್ಬೊನೇಟ್, ಸೋಡಿಯಂ ಹೀರುವಿಕೆ ಅನುಪಾತ (SAR), ಉಳಿದ ಸೋಡಿಯಂ ಕಾರ್ಬೊನೇಟ್ (RSC), ಕ್ಲೋರೈಡ್ (Cl) ಮತ್ತು ಸಲ್ಪೇಟ್.
ಪ್ರಾರಂಭ ವರ್ಷ : 2006
Plinth Area : 15.00 Sq.mt.
ಆರ್ಥಿಕ ನೆರವು
ಐಸಿಎಆರ್ : ರೂ 03.00 ಲಕ್ಷಗಳು
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ :ಶ್ರೀ ಜೆ.ಜಿ. ರಾಜಣ್ಣ
ಕಾರ್ಯಕ್ರಮ ಸಹಾಯಕ
94489 78836 -
ಗೋಶಾಲೆ
ಗೋಶಾಲೆಯುು ಸ್ಥಳೀಯ ತಳಿಗಳ ಹಸುಗಳು, ಕರುಗಳು, ಮತ್ತು ಎತ್ತುಗಳ ವಾಸಸ್ಥಾನ. ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶು ವಿಜ್ಞಾನ ಇಲಾಖೆಯ ಸಹಯೋಗದೊಂದಿಗೆ ಜೆಎಸ್ಎಸ್ ಕೆವಿಕೆಯು ಸ್ಥಳೀಯ ಜಾನುವಾರುಗಳನ್ನು ಸಂರಕ್ಷಿಸುವುದನ್ನು ಪಾಲನೆ/ಪೋಷಣೆ ಮಾಡುತ್ತಿದೆ.
ಪ್ರಾರಂಭ ವರ್ಷ : 2018
ವಿಸ್ತೀರ್ಣ : 120.00 ಚ.ಮಿ.
ಆರ್ಥಿಕ ನೆರವು
ಪಶು ಇಲಾಖೆ : ರೂ 30.00 ಲಕ್ಷಗಳಲ್ಲಿ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀ ಗಂಗಪ್ಪ ಹಿಪ್ಪರಗಿ
ಫಾರಂ ಮ್ಯಾನೇಜರ್
94499 95699 -
ಬಾಳೆ ಸಂವೃದ್ಧಿ ಘಟಕ
ಬಾಳೆ ಸಂವೃದ್ಧಿಯು ಒಂದು ಬಹು ಪೋಷಕಾಂಶಗಳ ಮಿಶ್ರಣವಾಗಿದ್ದು ಜಿಂಕ್, ಮೆಗ್ನಿಶಿಯಂ, ಕಬ್ಬಿಣ, ಬೋರಾನ್ ಮತ್ತು ಮಾಲಿಬ್ಡಿನಮ್. ಬಾಳೆ ಸಂವೃದ್ಧಿಯು ಬೆಂಗಳೂರಿನ ಐಐಹೆಚ್ಆರ್ ನ ಸ್ವಾಮ್ಯದಾಗಿದ್ದು, ಕೆವಿಕೆಗಳಿಗೆ ಮಿಶ್ರಣವನ್ನು ತಯಾರಿಸಿ ರೈತರಿಗೆ ನೀಡಲು ತಂತ್ರಜ್ಞಾನವನ್ನು ನೀಡಲಾಗಿದೆ.
ಪ್ರಾರಂಭ ವರ್ಷ : 2012
ವಿಸ್ತೀರ್ಣ : 5.00 ಚ.ಮಿ.
ಆರ್ಥಿಕ ನೆರವು
ಸುತ್ತುನಿಧಿ : ರೂ 0.30 ಲಕ್ಷಗಳು
ಹೆಚ್ಚಿನ ಮಾಹಿತಿಗಾಗಿ
ಸಂರ್ಕಿಸಿ : ಶ್ರೀ ಜೆ.ಜಿ. ರಾಜಣ್ಣ
ಕಾರ್ಯಕ್ರಮ ಸಹಾಯಕ
94489 78836
-
ತರಕಾರಿ ಸಂವೃದ್ಧಿ ಘಟಕ
ತರಕಾರಿ ಸಂವೃದ್ಧಿಯು ಕಡಿಮೆ ಖರ್ಚಿನ ಸೂಕ್ಷ್ಮ-ಪೋಷಕಾಂಶಗಳ ಸುರಕ್ಷಿತ ಸೂತ್ರೀಕರಣದ ಮಿಶ್ರಣವಾಗಿದೆ. ತರಕಾರಿ ಸಂವೃದ್ಧಿಯು ತರಕಾರಿಗಳಲ್ಲಿ ಉತ್ಪಾದನೆಯ ಹೆಚ್ಚಳ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಸಹಕರಿಸುತ್ತಿದೆ. ತರಕಾರಿ ಸಂವೃದ್ಧಿಯು ನೆಮಟೋಡ್ ಮತ್ತು ಹಾನಿಕಾರಕ ರೋಗಕಾರಕಗಳನ್ನು ತಡೆಯುತ್ತದೆ. ಇದು ಬೆಂಗಳೂರಿನ ಐಐಹೆಚ್ಆರ್ ನ ತಂತ್ರಜ್ಞಾನವಾಗಿದೆ.
ಪ್ರಾರಂಭ ವರ್ಷ : 2013
ವಿಸ್ತೀರ್ಣ : 5.00 ಚ.ಮಿ.
ಆರ್ಥಿಕ ನೆರವು
ಸುತ್ತುನಿಧಿ : ರೂ 0.30 ಲಕ್ಷಗಳು
ಹೆಚ್ಚಿನ ಮಾಹಿತಿಗಾಗಿ
ಸಂರ್ಕಿಸಿ : ಶ್ರೀ ಜೆ.ಜಿ. ರಾಜಣ್ಣ
ಕಾರ್ಯಕ್ರಮ ಸಹಾಯಕ
94489 78836 -
ಮಾವು ಸಂವೃದ್ಧಿ ಘಟಕ
ಮಾವು ಸಂವೃದ್ಧಿಯ ನಿರ್ದಿಷ್ಟ ದ್ವಿತೀಯ ಮತ್ತು ಸೂಕ್ಷ್ಮ ಪೋಷಕಾಂಶಗಳ ಜೊತೆಗೆ ಬೆಳವಣಿಗೆಯ ಪ್ರವರ್ತಕ ಮತ್ತು ನಿರ್ದಿಷ್ಟ ಹಾರ್ಮೋನುಗಳಾಗಿದೆ. ಮಾವು ಸಂವೃದ್ಧಿಯು ಮಾವು ಗಿಡಗಳ ಉತ್ತಮ ಬೆಳವಣಿಗೆ, ಹಣ್ಣು ಧಾರಣೆ, ಹೂವಿನ ಪ್ರಚೋದನೆ, ಹಣ್ಣಿನ ಬಣ್ಣ ಮತ್ತು ಗಾತ್ರವನ್ನು ಉತ್ತಮಗೊಳಿಸಲು ಸಹಕಾರಿಯಾಗಿ ಮಾಡುತ್ತದೆ. ಇದು ಬೆಂಗಳೂರಿನ ಐಐಹೆಚ್ಆರ್ ನ ತಂತ್ರಜ್ಞಾನವಾಗಿದೆ.
ಪ್ರಾರಂಭದ ವರ್ಷ : 2018
Plinth Area : 5.00 ಚ.ಮಿ.
ಆರ್ಥಿಕ ನೆರವು
ಸುತ್ತುನಿಧಿ : ರೂ 01.85 ಲಕ್ಷಗಳು
ಹೆಚ್ಚಿನ ಮಾಹಿತಿಗಾಗಿ
ಸಂರ್ಕಿಸಿ : ಶ್ರೀ ಜೆ.ಜಿ. ರಾಜಣ್ಣ
ಕಾರ್ಯಕ್ರಮ ಸಹಾಯಕ
94489 78836 -
ಎ.ಎಂ.ಸಿ
ಅರ್ಕಾ ಮೈಕ್ರೋಬಿಯಲ್ ಕನ್ಷಾಷಿಯಂ (ಎ.ಎಂ.ಸಿ)ಯು ವಾಹಕ ಆಧಾರಿತ ಉತ್ಪನ್ನವಾಗಿದೆ. ಸಾರಜನಕ ಫಿಕ್ಸಿಂಗ್,ರಂಜಕ ಮತ್ತು ಸತು ಕರಗುವಿಕೆ ಹಾಗೂ ಸಸ್ಯಗಳ ಬೆಳವಣಿಗೆ ಸೂಕ್ಷ್ಮಜೀವಿಗಳನ್ನು ಉತ್ತೇಜಿಸುವ ಒಂದು ಸೂತ್ರೀಕರಣವಾಗಿದೆ.ಇದು ಬೆಂಗಳೂರಿನ ಐಐಹೆಚ್ಆರ್ ನ ತಂತ್ರಜ್ಞಾನವಾಗಿದೆ.
ಪ್ರಾರಂಭದ ವರ್ಷ : 2018
ವಿಸ್ತೀರ್ಣ : 5.00 ಚ.ಮಿ.
ಆರ್ಥಿಕ ನೆರವು
ಸುತ್ತುನಿಧಿ : ರೂ 01.75 ಲಕ್ಷ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀ ಸತೀಶ್
ವಿಜ್ಞಾನಿ (ಸಸ್ಯ ಸಂರಕ್ಷಣೆ)
98864 93153 -
ತೋಟಗಾರಿಕೆ ನರ್ಸರಿ
ನರ್ಸರಿಯಲ್ಲಿ ಸಸಿಗಳನ್ನು ಒಂದು ಹಂತಕ್ಕೆ ಬೆಳೆಸಿ ಅದನ್ನು ರೈತರಿಗೆ, ನರ್ಸರಿಯವರಿಗೆ ಮತ್ತು ಗಾರ್ಡನರ್ ರವರಿಗೆ ಮಾರಾಟ ಮಾಡಲಾಗುವುದು. ತರಕಾರಿ ಬೆಳೆಗಳು, ಹಣ್ಣಿನ ಬೆಳೆಗಳು, ಹೂ ಬೆಳೆಗಳು ಮತ್ತು ಮಸಾಲೆ ಸಸಿಗಳನ್ನು ಬೇಡಿಕೆ ಆಧಾರದ ಮೇಲೆ ನೀಡಲಾಗುವುದು.
ಪ್ರಾರಂಭ ವರ್ಷ : 2010
ವಿಸ್ತೀರ್ಣ : 1600.00 ಚ.ಮಿ.
ಅರ್ಥಿಕ ನೆರವು
ಜೆಎಸ್ಎಸ್ ಎಂವಿಪಿ : ರೂ 10.84 ಲಕ್ಷ
ಸುತ್ತುನಿಧಿ : ರೂ 10.84 ಲಕ್ಷಗಳು
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀ ಮಹದೇವಸ್ವಾಮಿ
ರೈತ ಉದ್ಯಮಿ
90087 00873
-
ಎಫ್.ಪಿ.ಟಿ.ಸಿ.
ಆಹಾರ ಸಂಸ್ಕರಣಾ ಮತ್ತು ತರಬೇತಿ ಕೇಂದ್ರ (ಎಫ್.ಪಿ.ಟಿ.ಸಿ) ಮೂಲ ಉದ್ದೇಶ ರೈತ ಸಮುದಾಯಕ್ಕೆ ಆಹಾರ ಸಂಸ್ಕರಣಾ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿಯನ್ನು ನೀಡುವುದು. ಸದರಿ ಘಟಕವು ಇನ್ಕ್ಯುಬೇಟರ್ ಆಗಿಯೂ ಕೆಲಸ ನಿರ್ವಹಿಸುವುದರಿಂದ, ರೈತರು ಬಾಡಿಗೆಯಾದಾರದ ಮೇಲೆ ಕೆವಿಕೆಯ ತಜ್ಞರ ಮಾರ್ಗದರ್ಶನದೊಂದಿಗೆ ಉಪಯೋಗಿಸಿಕೊಂಡು ತಮ್ಮ ಆಹಾರ ಉತ್ಪನ್ನಗಳನ್ನು ತಯಾರಿಸಿ ಮೌಲ್ಯವರ್ಧನೆಗೊಳಿಸಿಕೊಳ್ಳಬಹುದಾಗಿದೆ.
ಪ್ರಾರಂಭ ವರ್ಷ : 2009
ವಿಸ್ತೀರ್ಣ : 200.00 ಚ.ಮಿ.
ಆರ್ಥಿಕ ನೆರವು
ಕೇಂದ್ರ ಸರ್ಕಾರ : ರೂ 7.20 ಲಕ್ಷ
ಜೆಎಸ್ಎಸ್ ಎಂವಿಪಿ : ರೂ 15.00 ಲಕ್ಷ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀಮತಿ ನೇತ್ರಾವತಿ
98446 62520 -
ಬೀಜ ಸಂಸ್ಕರಣಾ ಘಟಕ
ಬೀಜ ಸಂಸ್ಕರಣಾ ಘಟಕವು ರೈತರಲ್ಲಿ ಬೀಜೋತ್ಪಾದನೆಯನ್ನು ಹೆಚ್ಚಿಸಲು ನಿರ್ಮಿಸಲಾಗಿದೆ. ರೈತರು ಬೀಜವನ್ನು ಉತ್ಪಾದಿಸಿ ತಮ್ಮ ಸ್ವಂತಕ್ಕೆ ಹಾಗೂ ಇತರೆ ರೈತರಿಗೆ ಮಾರಲು ಸದರಿ ಘಟಕವನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಬೀಜೋತ್ಪಾದನೆಯ ಘಟಕವನ್ನು ಕೆ.ಎಸ್.ಎಸ್.ಸಿ, ಎನ್.ಎಸ್.ಸಿ ಹಾಗೂ ಇತರೆ ಸಂಘ ಸಂಸ್ಥೆಗಳಿಗೂ ಬಾಡಿಗೆ ನೀಡಲಾಗುವುದು.
ಪ್ರಾರಂಭ ವರ್ಷ : 2006/18
ವಿಸ್ತೀರ್ಣ : 362.00 ಚ.ಮಿ.
ಆರ್ಥಿಕ ನೆರವು
ಐಸಿಎಆರ್ : ರೂ 15.00 ಲಕ್ಷ
ಜೆಎಸ್ಎಸ್ ಎಂವಿಪಿ : ರೂ 14.50 ಲಕ್ಷ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀಮತಿ ಹೆಚ್.ವಿ. ದಿವ್ಯಾ
ವಿಜ್ಞಾನಿ (ಬೀಜ ತಂತ್ರಜ್ಞಾನ) 87628 40430 -
ಟ್ರೈಕೋಗ್ರಾಮ ಲ್ಯಾಬ್
ಟ್ರೈಕೋ ಕಾರ್ಡ್ ಗಳಿಂದ ಜೋಳ, ಭತ್ತ, ಕಬ್ಬು ಹಾಗೂ ರಾಗಿ ಬೆಳೆಗಳಿಗೆ ಕಟ್ಟುವುದರಿಂದ ಬೆಳೆಗಳಿಗೆ ತಗಲುವ ಕೀಟ ಬಾದೆಯಿಂದ ರಕ್ಷಿಸಬಹುದಾಗಿದೆ. ಕೆವಿಕೆಯು ಇಲಾಖೆಯಿಂದ ಟ್ರೈಕೋ ಕಾರ್ಡ್ ಗಳನ್ನು ಬೇಡಿಕೆಯಾಧಾರದ ಮೇಲೆ ತಂದು ರೈತರಿಗೆ ಮಾರಾಟ ಮಾಡಲಾಗುವುದು. ಇದು ಜೈವಿಕ ಹತೋಟಿ ಕ್ರಮವಾಗಿದ್ದು ಇದರಿಂದ ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ.
ಪ್ರಾರಂಭ ವರ್ಷ : 2005
ವಿಸ್ತೀರ್ಣ : 100.00 ಚ.ಮಿ.
ಆರ್ಥಿಕ ನೆರವು
ಜೆಎಸ್ಎಸ್ ಎಂವಿಪಿ : ರೂ 2.75 ಲಕ್ಷ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀ ಎಸ್. ಸತೀಶ್
ವಿಜ್ಞಾನಿ (ಸಸ್ಯ ಸಂರಕ್ಷಣೆ)
98864 93153
-
ಡೈರಿ ಘಟಕ
ಪಶು ಸಂಗೋಪನೆ ಬೇಸಾಯದ ಒಂದು ಭಾಗವಾಗಿದ್ದು ರೈತರಿಗೆ ನಿರಂತರ ಆದಾಯವನ್ನು ನೀಡುವುದಾಗಿದೆ. ಪಶುಸಂಗೋಪನೆಯಿಂದ ಗೊಬ್ಬರ, ಗೋಮೂತ್ರ ಮೊದಲಾದ ಕೃಷಿ ಉಪ ಉತ್ಪನ್ನವನ್ನು ಪಡೆಯಬಹುದಾಗಿದೆ. ಗೊಬ್ಬರದಿಂದ ಜೀವಾಮೃತ, ಎರೆಗೊಬ್ಬರ ಹಾಗೂ ಸಾವಯವ ವಿಭೂತಿಯನ್ನು ತಯಾರಿಸಬಹುದಾಗಿದೆ. ಕೆವಿಕೆ ಬರುವ ರೈತರಿಗೆ ಪಶು ಸಂಗೋಪನೆಯನ್ನು ಪ್ರಚಾರಪಡಿಸಲು ಡೈರಿ ಘಟಕವನ್ನು ನಿರ್ವಹಿಸಲಾಗುತ್ತಿದೆ.
ಪ್ರಾರಂಬ ವರ್ಷ : 2005
ವಿಸ್ತೀರ್ಣ : 80.00 ಚ.ಮಿ.
ಆರ್ಥಿಕ ನೆರವು
ಐಸಿಎಆರ್ : ರೂ 1.16 ಲಕ್ಷ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀ ಗಂಗಪ್ಪ ಹಿಪ್ಪರಗಿ
ಫಾರಂ ಮ್ಯಾನೇಜರ್
94499 95699
-
ಚಾಕಿ ಸಾಕಾಣಿಕಾ ಕೇಂದ್ರ
ಚಾಕಿ ಸಾಕಾಣಿಕಾ ಕೇಂದ್(ಸಿ.ಆರ್.ಸಿ)ನ್ನು ರೈತರಿಗೆ ರೇಷ್ಮೆ ಮೊಟ್ಟೆಗಳನ್ನು ನೀಡುವ ಬದಲಾಗಿ ಒಂದು ಹಂತಕ್ಕೆ ಚಾಕಿ ಹುಳುಗಳನ್ನು ಸಾಕಿ ನೀಡುವ ಸಲುವಾಗಿ ತೆರೆದಿದೆ. ಸಿ.ಆರ್.ಸಿಯನ್ನು ಪ್ರಗತಿಪರ ರೈತ ಉದ್ಯಮಿಗಳು ಅಥವಾ ಸ್ವಸಹಾಯ ಸಂಘಗಳು ನಡೆಸಲು ಅವಕಾಶ ನೀಡಲಾಗಿದೆ.
ಪ್ರಾರಂಭ ವರ್ಷ : 2005
ವಿಸ್ತೀರ್ಣ : 100.00 ಚ.ಮಿ.
ಆರ್ಥಿಕ ನೆರವು
ಜೆಎಸ್ಎಸ್ಎಂವಿಪಿ : ರೂ 2.27 ಲಕ್ಷ
ಡಿಬಿಟಿ : ರೂ 3.13 ಲಕ್ಷ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀ ಗಂಗಪ್ಪ ಹಿಪ್ಪರಗಿ
ಫಾರಂ ಮ್ಯಾನೇಜರ್
94499 095699 -
ಕೈ ತೋಟ
ಮನೆಯವರಿಗೆ ತರಕಾರಿಗಳು, ಸೊಪ್ಪುಗಳನ್ನು ಎಲ್ಲಾ ಸಮಯದಲ್ಲಿ ಸಾವಯವವಾಗಿ ಬೆಳೆಯಲು ಮನೆಯ ಹಿತ್ತಲಿನಲ್ಲಿ ಕೈತೋಟವನ್ನು ರೈತರು ನಿರ್ಮಿಸಲು ಪ್ರೇರಣೆಯಾಗಿ ಕೆವಿಕೆಯಲ್ಲಿ ಕೈತೋಟ ಪ್ರಾತ್ಯಕ್ಷಿಕೆಯನ್ನು ರೈತರ ವಸತಿ ನಿಲಯದ ಹಿಂಭಾಗ ನಿರ್ಮಿಸಲಾಗಿದೆ. ಇದರ ಪ್ರಯೋಜನವನ್ನು ರೈತರು, ಸಿಬ್ಬಂದಿವರ್ಗ ಹಾಗೂ ವಸತಿನಿಲಯದ ಸಿಬ್ಬಂದಿ ಪಡೆಯುತ್ತಿದ್ದಾರೆ.
ಪ್ರಾರಂಭದ ವರ್ಷ : 2018
ವಿಸ್ತೀರ್ಣ : 2500.00 ಚ.ಮಿ.
ಅರ್ಥಿಕ ನೆರವು
ಕೆವಿಕೆಯ ಸುತ್ತುನಿಧಿ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀಮತಿ ನೇತ್ರಾವತಿ ವೈ
ವಿಜ್ಞಾನಿ (ಗೃಹ ವಿಜ್ಞಾನ) 98446 62520 -
ಎರೆಹುಳು ಘಟಕ
ಎರೆಹುಳು ಗೊಬ್ಬರವನ್ನು ಕೃಷಿ ತ್ಯಾಜ್ಯ ಹಾಗೂ ಇನ್ನಿತರ ಹಸಿರು ತ್ಯಾಜ್ಯಗಳನ್ನು ಕೊಳೆಸಿ ಎರೆಹುಳುಗಳನ್ನು ಅದಕ್ಕೆ ಬಿಟ್ಟು, ಎರೆಹುಳು ಕೃಷಿ ತ್ಯಾಜ್ಯವನ್ನು ತಿಂದು ಹಿಕ್ಕೆ ಹಾಕುವುದೇ ಎರೆಗೊಬ್ಬರವಾಗಿದೆ. ಎರೆಗೊಬ್ಬರ ಹೆಚ್ಚು ಪೋಷಕಾಂಶಗಳಿಂದ ಕೂಡಿದ ಸಾವಯವ ಗೊಬ್ಬರವಾಗಿದೆ. ಎರೆಗೊಬ್ಬರಕ್ಕೆ ಟ್ರೈಕೋಡರ್ಮ ಹಾಗೂ ನೀಮ್ ಕೇಕ್ ಮಿಶ್ರಣ ಮಾಡಿ ಮೌಲ್ಯವರ್ದಿತಗೊಳಿಸಲಾಗುತ್ತದೆ.
ಪ್ರಾರಂಭದ ವರ್ಷ : 2000
ವಿಸ್ತೀರ್ಣ : 40.00 ಚ.ಮಿ.
ಆರ್ಥಿಕ ಸಹಕಾರ
ಕೆವಿಕೆ ಸುತ್ತುನಿಧಿ : ರೂ -0.30 ಲಕ್ಷ
ಜೆಎಸ್ಎಸ್ ಎಂವಿಪಿ : ರೂ 0.10 ಲಕ್ಷ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀ ಗಂಗಪ್ಪ ಹಿಪ್ಪರಗಿ
-
ಟೆರಕೋಟಾ ಘಟಕ (ಸ್ಟಾರ್ಟಪ್)
ಕುಂಬಾರಿಕೆಯು ಮಣ್ಣನ್ನು ಒಂದು ಹದಕ್ಕೆ ತಂದು ತಮಗೆ ಬೇಕಾದ ಆಕಾರದಲ್ಲಿ ಉದಾ, ಒಲೆ, ಮಡಿಕೆ, ಕುಡಿಕೆ, ಹೂ ಕುಂಡಗಳು, ದೀಪಗಳು ಹಾಗೂ ಟೆರಕೋಟಾ ಸಾಮಾಗ್ರಿಗಳುನ್ನು ಮಾಡುವುದಾಗಿದೆ. ಈ ಘಟವನ್ನು ಯುವ ಉದ್ಯಮಿಗೆ ನೀಡಿದ್ದು ಸದರಿಯವರು ಬೇಡಿಕೆ ಆಧಾರದ ಮೇಲೆ ಕುಂಬಾರಿಕೆಯನ್ನು ಮಾಡುತ್ತಾರೆ.
ಪ್ರಾರಂಭದ ವರ್ಷ : 2016
ವಿಸ್ತೀರ್ಣ : 20.00 ಚ.ಮೀ.
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಶ್ರೀ ರಂಗಸ್ವಾಮಿ
ಮಳವಳ್ಳಿ
ಮಂಡ್ಯ ಜಿಲ್ಲೆ
90368 46069