ಅಗ್ರಿ ಕ್ಲಿನಿಕ್

ಸಂಶೋಧನೆ ಮತ್ತು ತಂತ್ರಜ್ಞಾನದ ಬೆಳವಣಗೆಯಿಂದ ಕೃಷಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ದುರದೃಷ್ಟವಶಾತ್ ಅನೇಕ ರೈತರು ಆವಿಷ್ಕಾರಗಳು ಹಾಗೂ ಹೊಸ ಕೃಷಿ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಳ್ಳುತ್ತಿಲ್ಲ. ಹೊಸ ಆವಿಷ್ಕಾರಗಳನ್ನು ರೈತರಿಗೆ ನೀಡುವ ಜವಾಬ್ದಾರಿ ವಿಸ್ತರಣೆ ಪದ್ಧತಿ ಮೇಲಿದೆ. ಸಾರ್ವಜನಿಕ ವಿಸ್ತರಣಾ ಪದ್ಧತಿಯು ಮುಖ್ಯವಾಗಿ ಪೂರೈಕೆ ಆಧಾರಿತವಾಗಿದ್ದು, ಇದರಲ್ಲಿ ಸಂಶೋಧನಾ ಸಂಸ್ಥೆಗಳು ಬೆಳೆಗಳು, ತಳಿಗಳು, ಪೋಷಕಾಂಶಗಳು, ಕೀಟನಾಶಕಗಳು ಮತ್ತು ಬೇಸಾಯ ಕ್ರಮಗಳ ಕುರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ. ರಾಜ್ಯ ಸರ್ಕಾರದ ಕೃಷಿ ಇಲಾಖೆಯು ರೈತರಿಗೆ ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆದರೆ ಇಂದು ಬೀಜಗಳು, ರಸಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು ಮತ್ತು ನೀರಾವರಿ ಉಪಕರಣಗಳನ್ನು ಮಾರಾಟ ಮಾಡುವವರು ಖಾಸಗಿ ಏಜನ್ಸಿಯವರಾಗಿದ್ದಾರೆ.ವ
ಪ್ರಸಕ್ತ ಪೂರೈಕೆ ಆಧಾರಿತ ವಿಸ್ತರಣೆ ಪದ್ಧತಿಯು ಅನೇಕ ಪರಿಣಾಮಕಾರಿಯಲ್ಲದ -ತನ್ನದೇ ಆದ ಮಿತಿಗಳನ್ನು ಹೊಂದಿದೆ. ಇದರಿಂದ ಖಾಸಗಿ ಕಂಪನಿಯವರು ಬೆಲೆ ನಿಗಧಿ ಮಾಡುವಂತಾಗಿದೆ. ಸಾರ್ವಜನಿಕ ವಿಸ್ತರಣೆ ಪದ್ಧತಿಯನ್ನು ಪುನರ್ ಸ್ಥಾಪಿಸಲು ಬೇಡಿಕೆ ಆಧಾರಿತ ವಿಸ್ತರಣೆ ಸೇವೆಯನ್ನು ನೀಡಬೇಕಾಗಿದೆ. , ಇದರಲ್ಲಿರೈತರು ಸೂಕ್ತವಾದ ತಾಂತ್ರಿಕ ಮಾಹಿತಿ ಮತ್ತು ಗುಣಮಟ್ಟದ ಪರಿಕರಗಳನ್ನು ನಂಬಿಕೆಯುಳ್ಳ ಒಂದೇ ಜಾಗದಲ್ಲಿ (ಸೂರಿನಡಿ) ಪಡೆದುಕೊಳ್ಳುತ್ತಾರೆ. ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ಯಶಸ್ವಿಯಾಗಿ ಅಗ್ರಿ ಕ್ಲಿನಿಕ್ ಎನ್ನುವ ನೂತನ ಪರಿಕಲ್ಪನೆಯನ್ನು ಪ್ರಾರಂಭಿಸಿ ತಂತ್ರಜ್ಞಾನದ ಜೊತೆಗೆ ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ಒದಗಿಸುತ್ತಿದೆ.
2013 ರಲ್ಲಿ ಸ್ಥಾಪಿತವಾದ ಜೆಎಸ್ಎಸ್ ಅಗ್ರಿ ಕ್ಲಿನಿಕ್ 2 ವಿಧವಾದ ಉದ್ದೇಶಗಳನ್ನು ಹೊಂದಿದ್ದು, ಮುಖ್ಯವಾಗಿ ಕೃಷಿಯಲ್ಲಿ ರಸಗೊಬ್ಬರಗಳ ಬಳಕೆ ಕಡಿಮೆಮಾಡುವುದು ಮತ್ತು ಈ ಮೂಲಕ ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆಮಾಡುವುದು. ಅಗ್ರಿ ಡಾಕ್ಟರ್ ರಿಂದ ಸೂಕ್ತವಾದ ತಾಂತ್ರಿಕ ಮಾಹಿತಿಯನ್ನು ನೀಡುವುದು ಮತ್ತು ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಅಗ್ರಿ ಫಾರ್ಮಸಿ ಮುಖಾಂತರ ಮಾರಾಟಮಾಡುವುದರ ಮೂಲಕ ಈ ಎರಡು ಉದ್ಧೇಶಗಳನ್ನು ಸಾಧಿಸುವುದು. ಕೆವಿಕೆಯ ತಾಂತ್ರಿಕ ಸಿಬ್ಬಂದಿಯವರು ಸಸ್ಯ ಡಾಕ್ಟರ್ (ವೈದ್ಯರು). ಅವರು ಬೆಳೆಗಳ ಸಮಸ್ಯೆಯನ್ನು ಪರಿಶೀಲಿಸಿ ಮತ್ತು ಸೂಕ್ತ ಸಲಹೆ ನೀಡುವುದರ ಆಧಾರದ ಮೇಲೆ ರೈತರು ಕೃಷಿ ಪರಿಕರಗಳನ್ನು ಕೆವಿಕೆಯ ಅಗ್ರಿ ಫಾರ್ಮಸಿ ಮೂಲಕ ಪಡೆಯಬಹುದು.ಕೃಷಿ ಪರಿಕರಗಳನ್ನು ಕೆವಿಕೆಯು ಸ್ಥಳಿಯ ಡೀಲರ್ಸ್ ಮತ್ತು ವಿತರಣೆಗಾರರಿಂದ ಖರೀದಿಸುವುದು. ಈ ಮಾಡೆಲ್ 5 ವರ್ಷಗಳಿಂದ ಸುಮಾರು 30000 ರೈತರಿಗೆ ಸೇವೆಯನ್ನು ಒದಗಿಸಿದೆ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿದೆ. ವ
ರೈತರು ಅಗ್ರಿ ಕ್ಲಿನಿಕ್ ಭೇಟಿ ನೀಡಿರುವುದು (ವರ್ಷ ಹಾಗೂ ತಿಂಗಳು)
ತಿಂಗಳು | 2013-14 | 2014-15 | 2015-16 | 2016-17 | 2017-18 | 2018-19 |
---|---|---|---|---|---|---|
ಏಪ್ರಿಲ್ | - | 137 | 210 | 483 | 815 | 865 |
ಮೇ | - | 150 | 130 | 701 | 1024 | 947 |
ಜೂನ್ | - | 309 | 316 | 770 | 1521 | 802 |
ಜುಲೈ | 193 | 189 | 560 | 987 | 351 | 729 |
ಆಗಸ್ಟ್ | 289 | 189 | 169 | 924 | 989 | 782 |
ಸೆಪ್ಟೆಂಬರ್ | 366 | 442 | 593 | 971 | 866 | 994 |
ಅಕ್ಟೋಬರ್ | 463 | 706 | 826 | 1092 | 1292 | 1357 |
ನವೆಂಬರ್ | 84 | 291 | 689 | 1183 | 1244 | 765 |
ಡಿಸೆಂಬರ್ | 104 | 261 | 770 | 649 | 738 | 600 |
ಜನವರಿ | 104 | 190 | 750 | 697 | 794 | 510 |
ಫೆಬ್ರವರಿ | 83 | 241 | 525 | 774 | 755 | 405 |
ಮಾರ್ಚಿ | 152 | 276 | 612 | 933 | 648 | 678 |
ಒಟ್ಟು | 1838 | 3361 | 6671 | 10164 | 11037 | 9434 |