ಅಕ್ಟೋಬರ್ ಹಾಗೂ ನವೆಂಬರ್ 2021ರ ಕಾರ್ಯಕ್ರಮಗಳು


ಗಾಂಧಿ ಜಯಂತಿ ದಿನಾಚರಣೆ

ಸುತ್ತೂರು ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಹಿರಿಯ ನಾಗರೀಕರದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೆಎಸ್ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ಜಂಟಿ ನಿರ್ದೇಶಕರಾದ ಶ್ರೀ ಕೆ.ಎಲ್. ರೇವಣ್ಣಸ್ವಾಮಿರವರು ಭಾಗವಹಿಸಿದ್ದರು. ಸಮಾರಂಭದಲ್ಲಿ ಜೆಎಸ್ಎಸ್ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಎಸ್. ಪಿ. ಉದಯಶಂಕರ್, ಸಂಸ್ಥೆಯ ಮುಖ್ಯಸ್ಥರುಗಳು ಹಾಗೂ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.


ರಾಷ್ಟ್ರೀಯ ರೈತ ಮಹಿಳೆ ಹಾಗೂ ವಿಶ್ವೆ ಆಹಾರ ದಿನಾಚರಣೆ

ದಿನಾಂಕ 16 ಅಕ್ಟೋಬರ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಮೈಸೂರಿನ ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್ ಹಾಗೂ ಮೈಸೂರಿನ ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ರಾಷ್ಟ್ರೀಯ ರೈತ ಮಹಿಳೆ ಹಾಗೂ ವಿಶ್ವೆ ಆಹಾರ ದಿನವನ್ನು ಮೈಸೂರಿನ ಇನ್ಸಿಟಿಟೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಗತಿಪರ ಮಹಿಳೆ ಶ್ರೀಮತಿ ಸ್ವರೂಪರಾಣಿಯವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ 60ಕ್ಕೂ ಹೆಚ್ಚು ರೈತ ಮಹಿಳೆಯರು ಭಾಗವಹಿಸಿದ್ದರು.


ರಾಷ್ಟ್ರೀಯ ಸ್ವಚ್ಛತಾ ಅಭಿಯಾನ

ನಂಜನಗೂಡು ತಾಲ್ಲೂಕಿನ ಸೋನಹಳ್ಳಿ ಗ್ರಾಮದಲ್ಲಿ ಸುತ್ತೂರಿನ ಐಸಿಎಆಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದಿನಾಂಕ 12 ಅಕ್ಟೋಬರ್ 2021 ರಂದು ಭಾರತ ಸರ್ಕಾರದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಡಿ ಕಸ ದಿಂದ ರಸ ಎಂಬ ಧ್ಯೇಯದೊಂದಿಗೆ ಕೃಷಿತ್ಯಾಜ್ಯಗಳಿಂದ ಎರೆಗೊಬ್ಬರ ಮತ್ತು ಜಮೀನಿನಲ್ಲಿಯೇ ವೇಗವಾಗಿ ಸಾವಯುವ ವಸ್ತುಗಳನ್ನು ಕೊಳೆಯುವಿಕೆ ಮಾಡುವಂತಹ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ತರಬೇತಿಯನ್ನು ನೀಡಲಾಯಿತು.ಈ ಕಾರ್ಯಕ್ರಮದಲ್ಲಿ ಬೇಸಾಯಶಾಸ್ತ್ರ ವಿಜ್ಞಾನಿ ಶ್ರೀಶಾಮರಾಜ್, ಮಣ್ಣು ವಿಜ್ಞಾನಿ ಶ್ರೀ ಜೆ.ಜಿರಾಜಣ್ಣ, ಪಶು ವಿಜ್ಞಾನಿ ಡಾ. ರಕ್ಷಿತ್ ರಾಜ್, ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಭಾಗವಹಿಸಿ ಮಾಹಿತಿ ನೀಡಿದರು. ತರಬೇತಿಯಲ್ಲಿ ಸೋನಹಳ್ಳಿ ಗ್ರಾಮದ 30ಕ್ಕೂ ಹೆಚ್ಚು ರೈತ/ರೈತ ಮಹಿಳೆಯರು ಭಾಗವಹಿಸಿದ್ದರು.


ಸಮಗ್ರ ಪೋಷಕಾಂಶ ತರಬೇತಿ

ಹೆಚ್.ಡಿ. ಕೋಟೆ ತಾಲೂಕಿನ ಮಾಗುಡಿಲು ಗ್ರಾಮದಲ್ಲಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಿಂದ ದಿನಾಂಕ 22 ಅಕ್ಟೋಬರ್ 2021 ರಂದು ಸಮಗ್ರ ಪೋಷಕಾಂಶ, ಕೀಟ ಮತ್ತು ರೋಗಗಳ ನಿರ್ವಹಣೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಯಾನಿ ಶಾಮರಾಜ್ ಮಾತನಾಡಿ ಮುಸುಕಿನ ಜೋಳದಲ್ಲಿ ಸಮಗ್ರವಾಗಿ ಕೀಟಗಳ ನಿರ್ವಹಣೆ ಮಾಡುವುದರಿಂದ ಹೆಚ್ಚಾಗಿ ಕಂಡು ಬರುವ ಸೈನಿಕ ಹುಳುವನ್ನು ಕಡಿಮೆ ಖರ್ಚಿನಲ್ಲಿ ನಿಯಂತ್ರಣ ಮಾಡಬಹುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಜ್ಞಾನಿ ಡಾ. ವಿನಯ್ ಜಿ. ಎಂ., ಮಾತನಾಡಿ ಬಾಳೆ ಬೆಳೆಯಲ್ಲಿ ಬರುವ ಸೊರಗು ರೋಗ ಮತ್ತು ಎಲೆ ಚುಕ್ಕೆ ರೋಗವನ್ನು ಸಮಗ್ರ ನಿರ್ವಹಣೆ ಪದ್ಧತಿ ಮೂಲಕ ರೋಗಗಳನ್ನು ಹತೋಟಿ ಮಾಡಬಹುದು ಎಂದು ತಿಳಿಸಿದರು, ಈ ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು 30 ಜನ ರೈತರು ಭಾಗಿಯಾಗಿ ಉಪಯೋಗ ಪಡೆದುಕೊಂಡರು.


ಕಾರ್ಯಾಗಾರ

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಕರ್ನಾಟಕ ಸರ್ಕಾರ ಹಾಗೂ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ದಿನಾಂಕ 30.10.2021 ರಂದು ಸುತ್ತೂರು ಶ್ರೀಕ್ಷೇತ್ರದಲ್ಲಿನ ಜೆಎಸ್ಎಸ್ ಶಿಕ್ಷಣ ಸಮುಚ್ಚಯದ ಅಲ್ಲಮಪ್ರಭು ಸಭಾಂಗಣದಲ್ಲಿ ಇಂಧನ ಉಳಿತಾಯ ಮತ್ತು ನೀರು ಸಂರಕ್ಷಣಾ ಕ್ರಮಗಳ ಕುರಿತು ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪಕೃಷಿ ನಿರ್ದೇಶಕರಾದ ಶ್ರೀ ಜಿ.ಹೆಚ್. ಯೋಗೀಶ್ರವರು ಮಣ್ಣು ಹಾಗೂ ನೀರು ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಇಲಾಖೆಯ ತಾಂತ್ರಿಕ ಅಧಿಕಾರಿಯಾದ ಶ್ರೀ ಎನ್. ಎಂ. ದಿನೇಶ್ ಕುಮಾರ್ರವರು ಮಾತನಾಡಿ ಕೃಷಿಕರಿಗೆ ಸಬ್ಸಿಡಿ ಆಧಾರದ ಮೇಲೆ ಕೃಷಿ ಪಂಪ್ ಸೆಟ್ ಜೊತೆಗೆ ಸೋಲಾರ್ ಪ್ಯಾನಲ್ ನ್ನು ನೀಡಲಾಗುತ್ತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳುವಂತೆ ಕರೆನೀಡಿದರು. ಕಾರ್ಯಾಗಾರದಲ್ಲಿ ಕೆವಿಕೆಯ ಸಿಬ್ಬಂದಿಗಳು, ಈಶಾ ಫೌಂಡೇಶನ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಔಟ್ ರೀಚ್ ಸಂಸ್ಥೆಯ ರೈತರು, ಜೆಎಸ್ಎಸ್ ಕಾಲೇಜಿನ ಬಿಎಡ್ ವಿದ್ಯಾರ್ಥಿಗಳು ಹಾಗೂ ರೈತ/ರೈತ ಮಹಿಳೆಯರು 135 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.


29ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ

ದಿನಾಂಕ 15 ನವೆಂಬರ್ 2021 ರಂದು ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ 29ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯನ್ನು ಕೆವಿಕೆಯ ವಸತಿ ನಿಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೆಂದ್ರದ ಸಿಬ್ಬಂದಿವರ್ಗದವರು 2021ನೆಯ ಸಾಲಿನ ಪ್ರಗತಿ ವರದಿಯನ್ನು ಮಂಡಿಸಿದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಡಾ. ಸಿ.ಜಿ. ಬೆಟ್‌ಸೂರ್‌ಮಠ, ಬೆಂಗಳೂರು ಐಸಿಎಆರ್ ಅಟಾರಿ ನಿರ್ದೇಶಕರಾದ ಡಾ. ವಿ.ವೆಂಕಟಸುಬ್ರಮಣಿಯನ್ ರವರು, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರಾದ ಡಾ. ಎನ್. ದೇವಕುಮಾರ್, ತೋಟಗಾರಿಕಾ ನಿರ್ದೇಶಕರಾದ ಶ್ರೀ ಎನ್. ಎಮ್. ಶಿವಶಂಕರಪ್ಪ, ಪ್ರಗತಿ ಪರ ರೈತರು, ವಿವಿಧ ಇಲಾಖೆ, ಸಂಸ್ಥೆಯ ಅಧಿಕಾರಿಗಳು ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದರು.


ಕೃಷಿ ಹಾಗೂ ಪರಿಸರ: ಭವಿಷ್ಯದ ಕೃಷಿ ನಾಗರೀಕರು

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 26 ನವೆಂಬರ್ 2021 ರಂದು ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಕೃಷಿ ಹಾಗೂ ಪರಿಸರ: ಭವಿಷ್ಯದ ನಾಗರೀಕರು’ ಎಂಬ ವಿಷಯದ ಕುರಿತಾದ ಕಾರ್ಯಕ್ರಮವನ್ನು ಸುತ್ತೂರಿನ ಜೆಎಸ್ಎಸ್ ಪ್ರೌಢಶಾಲೆಯ 60 ಮಕ್ಕಳಿಗೆ ಹಮ್ಮಿಕೊಳ್ಳಲಾಗಿತ್ತು. ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀ ಹೆಚ್.ವಿ.ದಿವ್ಯಾರವರು ಶಾಲಾ ಮಕ್ಕಳಿಗೆ ಕೃಷಿ ಬಗ್ಗೆ ಮಾಹಿತಿ ನೀಡಿದರು ವಿವಿಧ ಪ್ರಾತ್ಯಕ್ಷಿಕಾ ತಾಕುಗಳಿಗೆ ಭೇಟಿ ಹಾಗೂ ಅವುಗಳ ಬಗ್ಗೆ. ಕೃಷಿ ಹಾಗೂ ಪೂರಕ ಚಟುವಟಿಕೆಗಳ ಬಗ್ಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ 23 ಮಕ್ಕಳು ಭಾಗವಹಿಸಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.


ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ ಭೇಟಿ ಸಂಖ್ಯೆ: