ಆಗಸ್ಟ್ ಮತ್ತು ಸೆಪ್ಟೆಂಬರ್ 2021 ಕಾರ್ಯಕ್ರಮಗಳು


ಸಿರಿಧಾನ್ಯಗಳ ಅರಿವು ಮೂಡಿಸುವ ಕಾರ್ಯಕ್ರಮ

ದಿನಾಂಕ 05 ಆಗಸ್ಟ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್  ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೆ. ಆರ್. ನಗರ ತಾಲ್ಲೂಕಿನ ಕೃಷಿ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಸಿರಿಧಾನ್ಯಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಿರ್ಲೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಗೀತಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೈಸೂರು ಜಿಲ್ಲೆಯ ಹುಣಸೂರು ವಿಭಾಗದ ಉಪ ಕೃಷಿ ನಿರ್ದೇಶಕರಾದ ಶ್ರೀ ಧನಂಜಯ್ ಡಿ. ಎನ್. ರವರು ಮಾತನಾಡಿ ಸಿರಿಧಾನ್ಯಗಳನ್ನು ನಮ್ಮ ಪೂರ್ವಜರ ಕಾಲದಲ್ಲಿ ಹೆಚ್ಚು ಬೆಳೆಯುತ್ತಿದ್ದರು ಮತ್ತು ಬಳಸುತ್ತಿದ್ದರು. ಆಧುನಿಕತೆ ಬೆಳೆದಂತೆ ಸಿರಿಧಾನ್ಯಗಳ ಬಳಕೆ ಕಡಿಮೆಯಾಗುತ್ತ ಬಂದಿದ್ದು ಸಕ್ಕರೆ ಕಾಯಿಲೆ, ಮಂಡಿನೋವು ಹಾಗೂ ಇತರ ರೋಗಗಳಿಗೆ ತುತ್ತಾಗುತ್ತಿದ್ದೇವೆ ಇದನ್ನು ನಿಯಂತ್ರಿಸಲು ಸಿರಿಧಾನ್ಯಗಳನ್ನು ಆಹಾರದಲ್ಲಿ ಬಳಸಬೇಕಾಗಿದೆ ಎಂದರು.


ಶಾಲಾ ಶಿಕ್ಷಣದಲ್ಲಿ ಕೃಷಿಯ ಪ್ರಾಮುಖ್ಯತೆ ಕುರಿತು ಶಾಲಾ ಶಿಕ್ಷಕರಿಗೆ ಎರಡು ದಿನದ ತರಬೇತಿ

ಕೃಷಿ ವಿಷಯವನ್ನು ಒಂದು ಆಸಕ್ತಿಕರ ಹಾಗೂ ಕೌಶಲ್ಯಧಾರಿತವಾಗಿ ಮಾಡುವ ಉದ್ದೇಶದಿಂದ ಶಾಲಾ ಶಿಕ್ಷಕರಿಗೆ ಕೃಷಿಯಲ್ಲಿ ಇರುವ ಅವಕಾಶ, ಆದ್ಯತೆ ಕುರಿತು ಶಾಲಾ ಶಿಕ್ಷಣದಲ್ಲಿ ಕೃಷಿಯ ಪ್ರಾಮುಖ್ಯತೆ ಕುರಿತು ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಮೈಸೂರು ಹಾಗು ಚಾಮರಾಜನಗರ ಜಿಲ್ಲೆಯ ೩೦ ವಿವಿಧ ಶಾಲೆಯ ಆಯ್ದ ೩೦ ಶಿಕ್ಷಕರಿಗೆ ೧೧-೧೨ ಆಗಸ್ಟ್‌ ೨೦೨೧ರಂದು ಕೆವಿಕೆಯಲ್ಲಿ ತರಬೇತಿ ನೀಡಲಾಯಿತು.


ಸಿರಿಧಾನ್ಯಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳು, ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತಾದ ಆನ್ ಲೈನ್‍ ತರಬೇತಿ ಕಾರ್ಯಕ್ರಮ

ದಿನಾಂಕ 13 ಆಗಸ್ಟ್ 2021 ರಂದು ಮೈಸೂರು ಜಿಲ್ಲೆಯ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಐಸಿಎಆರ್ ಐಐಎಚ್ಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (ಭಾರತ@75) ಅಂಗವಾಗಿ ಸಿರಿಧಾನ್ಯಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳು, ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತಾದ ಆನ್ ಲೈನ್‍ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೈಸೂರು ಹಾಗೂ ಕೊಡಗು ಜಿಲ್ಲೆ ಮತ್ತು ಇತರ ರೈತರು ಸೇರಿ ಸುಮಾರು 54ಕ್ಕೂ ಹೆಚ್ಚು ಜನರು ಹಾಗೂ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.


ಕೃಷಿ ಹಾಗೂ ಪೋಷಣೆ - ಬುಡಕಟ್ಟು ಕೃಷಿಗೆ ದಾರಿ ಎಂಬ ವಿಷಯದ ಕುರಿತು ತರಬೇತಿ ಕಾರ್ಯಕ್ರಮ

ದಿನಾಂಕ 11 ಆಗಸ್ಟ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹೆಚ್ ಡಿ ಕೋಟೆ ತಾಲ್ಲೂಕಿನ ಸೊಳ್ಳೇಪುರ ಪುನರ್ವಸತಿ ಕೇಂದ್ರದಲ್ಲಿ ಭಾರತದ ಅಮೃತ ಮಹೋತ್ಸವದ (ಭಾರತ @75) ಅಂಗವಾಗಿ ಕೃಷಿ ಹಾಗೂ ಪೋಷಣೆ - ಬುಡಕಟ್ಟು ಕೃಷಿಗೆ ದಾರಿ ಎಂಬ ವಿಷಯದ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸೊಳ್ಳೆಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಶಿಕ್ಷಕರು ಹಾಗೂ ಸೊಳ್ಳೇಪುರದ ಮಹಿಳೆಯರು ಸೇರಿ 30 ಜನರು ಭಾಗವಹಿಸಿದ್ದರು.


ಸಿರಿಧಾನ್ಯಗಳ ಅರಿವು ಮೂಡಿಸುವ ಕಾರ್ಯಕ್ರಮ – ಹೆಚ್.ಡಿ. ಕೋಟೆ

ದಿನಾಂಕ 17 ಆಗಸ್ಟ್ 2021 ರಂದು ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಸೊಳ್ಳೆಪುರ ಪುನರ್ವಸತಿ ಕೇಂದ್ರದಲ್ಲಿ ಸುತ್ತೂರಿನ ಐಸಿಎಆರ್  ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಹೆಚ್ ಡಿ ಕೋಟೆ ತಾಲ್ಲೂಕಿನ ಕೃಷಿ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಸಿರಿಧಾನ್ಯಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಅಡುಗೆ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸೊಳ್ಳೆಪುರ, ಚಕ್ಕೋಡನಹಳ್ಳಿ ಗ್ರಾಮದ 30 ಮಹಿಳೆಯರು ಸಿರಿಧಾನ್ಯಗಳ ಅಡುಗೆ ಸ್ಪರ್ಧೆಯಲ್ಲಿ ಹಾಗೂ 25 ಮಕ್ಕಳು ಸಿರಿಧಾನ್ಯಗಳ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಎರಡೂ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು ಜೊತೆಗೆ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ರೈತ/ರೈತ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ಪಾರ್ಥೇನಿಯಂ ಸಪ್ತಾಹ ಆಚರಣೆ

ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪಾರ್ಥೇನಿಯಂ ಸಪ್ತಾಹದ ಅಂಗವಾಗಿ ದಿನಾಂಕ 17 ಆಗಸ್ಟ್ 2021 ರಂದು ಹೆಚ್. ಡಿ. ಕೋಟೆ ತಾಲ್ಲೂಕಿನ ಸೊಳ್ಳೆಪುರ ಪುನರ್ವಸತಿ ಕೇಂದ್ರದಲ್ಲಿ ಪಾರ್ಥನಿಯಂ ನಿರ್ಮೂಲನಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಗಿತ್ತು. ಸೊಳ್ಳೆಪುರ ಪುನರ್ವಸತಿ ಕೇಂದ್ರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣ ಹಾಗೂ ಗ್ರಾಮದ ರೈತರ ಜಮೀನಿನಲ್ಲಿ ಪಾರ್ಥೇನಿಯಂ ಕಳೆಯನ್ನು ಕೀಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ 35ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಕೆವಿಕೆಯ ಆವರಣದಲ್ಲಿ ದಿನಾಂಕ ರಂದು ಪಾರ್ಥೇನಿಯಂ ಗಿಡಗಳನ್ನು ತೆಗೆದುಹಾಕಿ ಕೆವಿಕೆಗೆ ಬಂದ ರೈತರಿಗೆ ಪಾರ್ಥೇನಿಯಂ ಕುರಿತು ಅರಿವು ಮೂಡಿಸಲಾಯಿತು.


ಕೆವಿಕೆಯಲ್ಲಿ ಸಿರಿಧಾನ್ಯಗಳ ಅರಿವು ಮೂಡಿಸುವ ಕಾರ್ಯಕ್ರಮ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ನಂಜನಗೂಡು ಇವರ ಸಹಯೋಗದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಸಿರಿಧಾನ್ಯಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೈಸೂರು ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಡಾ. ಮಹಾಂತೇಶಪ್ಪ ಎಮ್. ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಿರಿಧಾನ್ಯಗಳ ಸೇವನೆಯಿಂದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು  ಸಹಕಾರಿಯಾಗಿವೆ ಎಂದು ತಿಳಿಸುತ್ತಾ ಸಿರಿಧಾನ್ಯ ಬೆಳೆಗಾರರಿಗೆ ಕೃಷಿ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ  ಹಾಗೂ  ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಅನೇಕ ಯೋಜನೆಗಳಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ಶಿವಕುಮಾರಸ್ವಾಮಿ, ಬಿಳಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಹಾದೇವಮ್ಮ ರಂಗಸ್ವಾಮಿಯವರು, ಸುತ್ತೂರಿನ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಕೆವಿಕೆಯ ಸಿಬ್ಬಂದಿಗಳು, ರೈತ/ರೈತ ಮಹಿಳೆಯರು, ಕೃಷಿ ಇಲಾಖೆಯ ಸಿಬ್ಬಂದಿಗಳು ಸೇರಿ 80 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.


ವಿಶ್ವ ತೆಂಗು ದಿನಾಚರಣೆ

ವಿಶ್ವ ತೆಂಗು ದಿನದ ಅಂಗವಾಗಿ ದಿನಾಂಕ 1 ಸೆಪ್ಟೆಂಬರ್ 2021 ರಂದು ರೈತರಿಗೆ ತೆಂಗಿನ ಸುಧಾರಿತ ಬೇಸಾಯ ಕ್ರಮಗಳ ಕುರಿತಾದ ಆನ್ ಲೈನ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಜಿ.ಎಂ. ವಿನಯ್ ಹಾಗೂ ಸಂಪನ್ಮೂಲ ವ್ಯಕ್ತಿಯಾದ ವಿಠ್ಠಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ತೋಟಗಾರಿಕಾ ವಿಜ್ಞಾನಿ ಡಾ. ಭವಿಷ್ಯ ರವರು ವಿಶ್ವ ತೆಂಗು ದಿನದ ಹಿನ್ನೆಲೆ ಬಗ್ಗೆ ತಿಳಿಸಿಕೊಟ್ಟರು.ಈ ತರಬೇತಿಯಲ್ಲಿ ಸುಮಾರು 52 ರೈತರು ಹಾಗೂ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.


ಹೊಲಿಗೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮ

ದಿನಾಂಕ 1 ಸೆಪ್ಟೆಂಬರ್ 2021 ರಂದು ಮೈಸೂರಿನ ಜೆಎಸ್ಎಸ್ ಜನಶಿಕ್ಷಣಾ ಸಂಸ್ಥೆ ಹಾಗೂ ಪುಣ್ಯಭೂಮಿ ಟ್ರಸ್ಟ್ ಸಹಯೋಗದಲ್ಲಿ ಹೊಲಿಗೆ 4 ತಿಂಗಳ ವೃತ್ತಿಪರ ತರಬೇತಿ ಕಾರ್ಯಕ್ರಮ ಮೈಸೂರು ತಾಲ್ಲೂಕಿನ ಪಿಲ್ಲಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಪಿಲ್ಲಹಳ್ಳಿ ಗ್ರಾಮದ 20 ಮಹಿಳೆಯರು ಭಾಗವಹಿಸಿದ್ದಾರೆ.


ಬೀಜದುಂಡೆ ತಯಾರಿ ಹಾಗೂ ಬಿತ್ತನೆ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ರಮ

ದಿನಾಂಕ 03.09.2021 ರಂದು ಎಸ್. ಹೊಸಕೋಟೆಯ ಶ್ರೀ ಗುರುಮಲ್ಲೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬೀಜದುಂಡೆ ತಯಾರಿ ಹಾಗೂ ಬಿತ್ತನೆ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ. ದಿವ್ಯಾ ರವರು ಬೀಜದುಂಡೆಯನ್ನು ಮಳೆಗಾಲದಲ್ಲಿ ಖಾಲಿ ಜಾಗಗಳಲ್ಲಿ ಹಾಕುವುದರಿಂದ ಬೀಜ ಮೊಳೆತು ಪರಿಸರ ಸಂರಕ್ಷಣೆ ಮಾಡಬಹುದು ಎಂದು ತಿಳಿಸಿದರು. ತರಬೇತಿಯಲ್ಲಿ 35 ವಿದ್ಯಾರ್ಥಿಗಳು ಹಾಗೂ 10 ಶಿಕ್ಷಕರು ಭಾಗವಹಿಸಿದ್ದರು.


ಬಿಳಿ ರಾಗಿ ಕೆಎಂಆರ್ 340 ತಳಿಯ ಮೌಲ್ಯವರ್ಧನೆ ತರಬೇತಿ

ದಿನಾಂಕ 8 ಸೆಪ್ಟೆಂಬರ್ 2021 ರಂದು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಬಿಳಿ ರಾಗಿ ಕೆ.ಎಮ್.ಆರ್ 340 ತಳಿಯ ಮೌಲ್ಯವರ್ಧನೆ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿನೇತ್ರಾವತಿ ಎತ್ತಿನಮನಿ, ವಿಜ್ಞಾನಿ (ಗೃಹ ವಿಜ್ಞಾನ) ರವರು ಬಿಳಿ ರಾಗಿಯ ಮಹತ್ವದ ಕುರಿತು ಹಾಗು ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸುವ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಅರಕೆರೆ ಗ್ರಾಮದ 30 ರೈತ/ರೈತ ಮಹಿಳೆಯರು ಭಾಗವಹಿಸಿದ್ದರು.


ಮುಸುಕಿನ ಜೋಳ ಬೆಳೆಯಲ್ಲಿ ನ್ಯಾನೋ ಯೂರಿಯಾ ಬಳಕೆ ಕುರಿತ ತರಬೇತಿ

ದಿನಾಂಕ 15 ಸೆಪ್ಟೆಂಬರ್ 2021 ರಂದು ಹೆಚ್.ಡಿ. ಕೋಟೆ ತಾಲ್ಲೂಕಿನ ಮಾಗುಡಿಲು ಗ್ರಾಮದಲ್ಲಿ ಮುಸುಕಿನ ಜೋಳ ಬೆಳೆಯಲ್ಲಿ ನ್ಯಾನೋ ಯೂರಿಯಾ ಮತ್ತು ಜಿಂಕ್ ಗೊಬ್ಬಗಳ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿ ಶ್ರೀ ಶಾಮರಾಜ್ ರವರು ಮಾತನಾಡಿ ಮುಸುಕಿನ ಜೋಳದಲ್ಲಿ ಸಮಗ್ರ ಬೆಳೆ ನಿರ್ವಹಣೆ ಹಾಗೂ ನ್ಯಾನೋ ಗೊಬ್ಬರವನ್ನು ಮುಸುಕಿನ ಜೋಳದಲ್ಲಿ ಬಳಸುವ ವಿಧಾನದ ಬಗ್ಗೆ ವಿವರಿಸಿದರು. ತರಬೇತಿಯಲ್ಲಿ ೩೫ ರೈತ/ರೈತ ಮಹಿಳೆಯರು ಭಾಗವಹಿಸಿದ್ದರು.


ಪೌಷ್ಟಿಕ ಕೈತೋಟ ಹಾಗೂ ಗಿಡ ನೆಡುವಿಕೆ ಅಭಿಯಾನ

ದಿನಾಂಕ 17 ಸೆಪ್ಟೆಂಬರ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಇಫ್ಕೋ ವತಿಯಿಂದ ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (ಭಾರತ @75) ಹಾಗೂ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023 ರ ಅಂಗವಾಗಿ ಪೌಷ್ಟಿಕ ಕೈತೋಟ ಹಾಗೂ ಗಿಡ ನೆಡುವಿಕೆ ಅಭಿಯಾನವನ್ನು ಸುತ್ತೂರಿನ ಜೆಎಸ್ಎಸ್ ವಸತಿ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕೇಂದ್ರ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ರವರು ಉದ್ಘಾಟನೆ ಮಾಡಿದ್ದು, ಅದರ ನೇರ ಪ್ರಸಾರವನ್ನು ಆನ್ ಲೈನ್ ಮೂಲಕ ವೀಕ್ಷಿಸಲಾಯಿತು. ಈ ಕಾರ್ಯಕ್ರಮದಲ್ಲಿ 114 ರೈತ/ರೈತ ಮಹಿಳೆಯರು ಹಾಗೂ 71 ಕಿಶೋರಿಯರು ಭಾಗವಹಿಸಿದ್ದರು. ಸುತ್ತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ಶಿವಕುಮಾರಸ್ವಾಮಿ ಹಾಗೂ ಬಿಳಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಹದೇವಮ್ಮರವರು ಉಪಸ್ಥಿತರಿದ್ದರು. 100 ತರಕಾರಿ ಬೀಜಗಳ ಕಿಟ್ ಹಾಗೂ 1000 ತರಕಾರಿ ಗಿಡಗಳನ್ನು ರೈತ/ರೈತ ಮಹಿಳೆಯರು ಹಾಗೂ ಕಿಶೋರಿಯರಿಗೆ ವಿತರಿಸಲಾಯಿತು.


ಜಲಶಕ್ತಿ ಅಭಿಯಾನದಡಿ ಹನಿ ನೀರಾವರಿ ಪದ್ಧತಿಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಲಶಕ್ತಿ ಅಭಿಯಾನದಡಿ ರೈತರಿಗೆ ಹನಿ ನೀರಾವರಿ ಪದ್ಧತಿಗಳ ಮೂಲಕ ನೀರು ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ದಿನಾಂಕ 22 ಸೆಪ್ಟೆಂಬರ್ 2021 ರಂದು ಆಯೋಜಿಸಲಾಗಿತ್ತು. ಈ ತರಬೇತಿಯಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ವಿನಯ್ ಜಿ ಎಂ ರವರು ಹನಿ ನೀರಾವರಿ ಹಾಗೂ ಇತರೆ ಹನಿ ನೀರಾವರಿಯ ಪದ್ಧತಿಗಳ ಮಹತ್ವದ ಬಗ್ಗೆ ತಿಳಿಸಿದರು. ಕೇಂದ್ರದ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರಾದ ಶ್ರೀ ರಾಜಣ್ಣರವರು ಬಾಳೆ ಬೆಳೆಯಲ್ಲಿ ರಸಾವರಿ ಪದ್ಧತಿ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ 30 ರೈತರು ಭಾಗವಹಿಸಿ ಉಪಯೋಗ ಪಡೆದುಕೊಂಡರು.


ಕೃಷಿಯಲ್ಲಿ ಪ್ರಾಯೋಗಿಕ ಅನುಭವ ತರಬೇತಿ ಕಾರ್ಯಕ್ರಮ

ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಐಟಿಸಿ ಮತ್ತು ಔಟ್ರೀಚ್ ಸಂಸ್ಥೆಗಳು, ಮೈಸೂರು ಇವರ ಸಹಯೋಗದೊಂದಿಗೆ ರೈತರಿಗೆ ಕೃಷಿಯಲ್ಲಿ ಪ್ರಾಯೋಗಿಕ ಅನುಭವ ತರಬೇತಿಯನ್ನು ದಿನಾಂಕ 22 ಸೆಪ್ಟೆಂಬರ್ 2021 ರಂದು ಕೆವಿಕೆಯಲ್ಲಿ ಹಮ್ಮಿಕೊಂಡಿತ್ತು, ಈ ತರಬೇತಿಯಲ್ಲಿ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ವಿನಯ್ ಜಿ ಎಂ ರವರು ರೈತರಿಗೆ, ತರಕಾರಿ ಬೆಳೆಯಲ್ಲಿ ಪ್ರೊಟ್ರೇ ಉಪಯೋಗಿಸಿಕೊಂಡು ಸಸಿ ತಯಾರಿಸುವ ವಿಧಾನ, ಎರೆಗೊಬ್ಬರ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು. ಈ ತರಬೇತಿ ಕಾರ್ಯಕ್ರಮದಲ್ಲಿ ಹುಣಸೂರು ತಾಲ್ಲೂಕಿನ ಅರವೆ ಗ್ರಾಮದ ಸುಮಾರು 30 ರೈತರು ಭಾಗವಹಿಸಿದ್ದರು.


ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ

ದಿನಾಂಕ 23 ಸೆಪ್ಟೆಂಬರ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮತೋಲನ ಆಹಾರ ಹಾಗೂ ಮಕ್ಕಳಿಗೆ ಪೂರಕ ಆಹಾರ ತಯಾರಿಕೆ ಮತ್ತು ಪೂರಕ ಆಹಾರಗಳಿಂದ ನೈಸರ್ಗಿಕ ಪೋಷಣೆ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಹಾಗೂ ಪೋಷಣಾ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ 37 ಅಂಗನವಾಡಿ ಸಿಬ್ಬಂದಿಗಳು ಭಾಗವಹಿಸಿದ್ದರು.


ರೈತ ಮಹಿಳೆಯರಿಗೆ ಕೃಷಿಯಲ್ಲಿ ಕೌಶಲ್ಯ ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಮೈಸೂರಿನ ಹ್ಯಾಂಡ್-ಇನ್-ಹ್ಯಾಂಡ್ ಸಂಸ್ಥೆಯ ಸಹಯೋಗದೊಂದಿಗೆ ರೈತ ಮಹಿಳೆಯರಿಗೆ ಕೃಷಿಯಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ದಿನಾಂಕ 23 ಸೆಪ್ಟೆಂಬರ್ 2021 ರಂದು ಕೆವಿಕೆಯಲ್ಲಿ ಹಮ್ಮಿಕೊಂಡಿತ್ತು, ಈ ತರಬೇತಿಯಲ್ಲಿ ಕೇಂದ್ರದ ತೋಟಗಾರಿಕ ವಿಜ್ಞಾನಿ ಡಾ. ವಿನಯ್ ಜಿ. ಎಂ. ರವರು ರೈತ ಮಹಿಳೆಯರಿಗೆ, ತರಕಾರಿ ಸಸಿಮಡಿ ತಯಾರಿಕೆ, ಹೈಡ್ರೋಫೋನಿಕ್ಸ್ ಪದ್ಧತಿಯಿಂದ ಮೇವು ಬೆಳೆ, ಕಡಿಮೆ ಖರ್ಚಿನಲ್ಲಿ ಎರೆಗೊಬ್ಬರ ತಯಾರಿಸುವ ವಿಧಾನವನ್ನು ವಿವರಿಸಿದರು. ಈ ತರಬೇತಿ ಕಾರ್ಯಕ್ರಮದಲ್ಲಿ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಮತ್ತು ಹುರ ಗ್ರಾಮದ ಸುಮಾರು 25 ರೈತ ಮಹಿಳೆಯರು ಭಾಗವಹಿಸಿ ಉಪಯೋಗ ಪಡೆದುಕೊಂಡರು.


ಕೋ-4 ತಳಿ ಮೇವು ಪ್ರಾತ್ಯಕ್ಷಿಕೆ ತರಬೇತಿ

ದಿನಾಂಕ 23 ಸೆಪ್ಟೆಂಬರ್ 2021 ರಂದು ಹೊಸ ಮೇವಿನ ತಳಿಗಳ ಬಗ್ಗೆ ರೈತರಿಗೆ ತರಬೇತಿಯನ್ನು ನೀಡಲಾಯಿತು. ಕೇಂದ್ರದ ಪಶು ವಿಜ್ಞಾನಿ ಡಾ. ರಕ್ಷಿತ್ ರಾಜ್ ಯು. ಎಂ. ರವರು ಮಾತನಾಡಿ ಹೊಸ ಮೇವಿನ ತಳಿ ಕೋ-4 (ನೇಪಿಯರ್), ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 28ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.


ರೈತ ಉತ್ಪಾದಕ ಕಂಪನಿಯ ಸದಸ್ಯರು ಹಾಗೂ ನಿರ್ದೇಶಕರಿಗೆ ಪ್ರಾರಂಭಿಕ ಹಂತದ ತರಬೇತಿ

ಶ್ರೀ ನಂಜುಂಡೇಶ್ವರ ರೈತ ಉತ್ಪಾದಕ ಕಂಪನಿಯ ಸದಸ್ಯರು ಹಾಗೂ ನಿರ್ದೇಶಕರಿಗೆ ಪ್ರಾರಂಭಿಕ ಹಂತದ ತರಬೇತಿಯನ್ನು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 24 ಸೆಪ್ಟೆಂಬರ್ 2021 ರಂದು ಹಮ್ಮಿಕೊಳ್ಳಲಾಗಿತ್ತು. ಈಶಾ ಫೌಂಡೇಶನ್ ನ ಲೀಗಲ್ ಎಕ್ಸಪರ್ಟ್ ರಾದ ಶ್ರೀಮತಿ ರಾಮಪ್ರಿಯ ರವರು ರೈತ ಉತ್ಪಾದಕ ಕಂಪನಿಯ ಕಾರ್ಯ ವೈಖರಿ ಹಾಗೂ ವೆಳ್ಳಿಂಗಿರಿ ಉಜ್ವಾನ್ ರೈತ ಉತ್ಪಾದಕ ಕಂಪನಿಯ ಯಶೋಗಾಥೆ ಬಗ್ಗೆ ತಿಳಿಸಿದರು. ಜೊತೆಗ ನಿರ್ದೇಶಕರ ಜವಾಬ್ದಾರಿ, ಸೂಕ್ತ ಸದಸ್ಯರ ಆಯ್ಕೆ, ರೈತರ ಮೂಲ ಮಾಹಿತಿ ಸಂಗ್ರಹದ ಬಗ್ಗೆ ತಿಳಿಸಿ, ರೈತ ಉತ್ಪಾದಕ ಕಂಪನಿ ಉತ್ತಮವಾಗಿ ಕೆಲಸ ನಿರ್ವಹಿಸಲು ಪ್ರೇರೆಪಿಸಿದರು. ತರಬೇತಿಯಲ್ಲಿ 15 ಸದಸ್ಯರು ಭಾಗವಹಿಸಿದ್ದರು.


ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ ಭೇಟಿ ಸಂಖ್ಯೆ: