ಏಪ್ರಿಲ್ ಮತ್ತು ಮೇ 2021 ಕಾರ್ಯಕ್ರಮಗಳು


ತೋಟಗಾರಿಕೆ ಮಹಾವಿದ್ಯಾಲಯ, ಕೊಪ್ಪಳದ ವಿದ್ಯಾರ್ಥಿಗಳ ಭೇಟಿ

ಕೊಪ್ಪಳದ ತೋಟಗಾರಿಕೆ ಮಹಾವಿದ್ಯಾಲಯದ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ದಿನಾಂಕ 1 ರಿಂದ 30 ಏಪ್ರೀಲ್ 2021 ರವರೆಗೆ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರಕ್ಕೆ ತಮ್ಮ ಗ್ರಾಮೀಣ ಕೃಷಿ ಅರಿವು ಕಾರ್ಯಕ್ರಮದಡಿ 29 ವಿದ್ಯಾರ್ಥಿಗಳು ಆಗಮಿಸಿದ್ದರು. ಈ ಕಾರ್ಯಕ್ರದಡಿ ಕೆವಿಕೆಯ ಆವರಣದಲ್ಲಿ ನಡೆಯುತ್ತಿರುವ ಸೀಬೆ ಲೆಯರಿಂಗ್, ಅರಿಶಿಣ ಸಸಿಗಳ ತಯಾರಿಕೆ, ಶುಂಠಿ ಹಾಗೂ ಬಾಳೆ ಬೇಸಾಯ, ಎರೆಗೊಬ್ಬರ ತಯಾರಿಕೆ, ಅಗ್ರಿ ಕ್ಲಿನಿಕ್, ಬೀಜ ಸಂಸ್ಕರಣಾ ಘಟಕ, ಆಹಾರ ಸಂಸ್ಕರಣೆ ಘಟಕ, ಕೈತೋಟ, ಮಣ್ಣು ಹಾಗೂ ನೀರು ಪರೀಕ್ಷೆ ಪ್ರಯೋಗಾಲಯಗಳ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.


ತೆಂಗಿನ ಮರ ಹತ್ತುವ ಕೌಶಲ್ಯಾಭಿವೃದ್ಧಿ ತರಬೇತಿ ಅಂತಿಮ ಪರೀಕ್ಷೆ

ದಿನಾಂಕ 8 ಏಪ್ರಿಲ್ 2021 ರಂದು ತೆಂಗಿನ ಮರ ಹತ್ತುವ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ಭಾಗವಹಿಸಿದ್ದ 19 ಶಿಬಿರಾರ್ಥಿಗಳಿಗೆ ಅಂತಿಮ ಪರೀಕ್ಷೆಯನ್ನು ಜೆಎಸ್ಎಸ್ ಕೆವಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಭಾಗವಹಿಸಿದ್ದ ಎಲ್ಲ ಶಿಬಿರಾರ್ಥಿಗಳಿಗೆ ತೆಂಗಿನ ಮರ ಹತ್ತುವ ಯಂತ್ರಗಳನ್ನು ನೀಡಲಾಯಿತು. ಮುಂದಿನ ದಿನಗಳಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.


ಕೆವಿಕೆಯ ವಾರ್ಷಿಕ ವರದಿ ಹಾಗೂ ಕ್ರಿಯಾ ಯೋಜನೆ ವರದಿ ಸಭೆ

ಬೆಂಗಳೂರಿನ ಅಟಾರಿ ಹಾಗೂ ಕೃಷಿ ವಿಶ್ವ ವಿದ್ಯಾನಿಲಯ, ಜಿಕೆವಿಕೆ ವತಿಯಿಂದ ದಿನಾಂಕ 16-17 ಏಪ್ರಿಲ್ 2021 ರಂದು ಏರ್ಪಿಸಿದ್ದ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಕೆವಿಕೆಗಳು, ಜೆಎಸ್ಎಸ್ ಕೆವಿಕೆ ಹಾಗೂ ಐಐಎಚ್ಆರ್ ಕೆವಿಕೆಯ ವಾರ್ಷಿಕ ವರದಿ -2020-21 ಹಾಗೂ ಕ್ರಿಯಾ ಯೋಜನೆ ವರದಿ 2021-22 ರ ಸಭೆಯನ್ನು ಆನ್ಲೈನ್ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಜೆಎಸ್ಎಸ್ ಕೆವಿಕೆಯ ಸಿಬ್ಬಂದಿಗಳು ಭಾಗವಹಿಸಿದ್ದರು ಹಾಗೂ ಕೇಂದ್ರದ ಬೀಜ ತಂತ್ರಜ್ಞಾನ ವಿಜ್ಞಾನಿಯಾದ ಶ್ರೀಮತಿ ದಿವ್ಯಾ ಹೆಚ್.ವಿ. ಯವರು ಜೆಎಸ್ಎಸ್ ಕೆವಿಕೆಯ ವಾರ್ಷಿಕ ವರದಿ ಹಾಗೂ ಕ್ರಿಯಾ ಯೋಜನೆ ವರದಿಯನ್ನು ಮಂಡಿಸಿದರು.ಸಭೆಯಲ್ಲಿ ಅಟಾರಿ ನಿರ್ದೇಶಕರು ಹಾಗೂ ಸಿಬ್ಬಂದಿಗಳು, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಕುಲಪತಿಗಳು ಹಾಗೂ ಸಿಬ್ಬಂದಿಗಳು ಹಾಗೂ 10 ಕೆವಿಕೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


ಗೋಶಾಲೆ ನಿರ್ವಹಣೆ ಹಾಗೂ ಗೋಶಾಲೆಗಳನ್ನು ಸ್ವಾವಲಂಭಿಗೊಳಿಸುವ ಕುರಿತು ಚರ್ಚಿಸಲು ಸಭೆ

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿರುವ ಹಿನ್ನಲೆಯಲ್ಲಿ ಗೋಶಾಲೆ ನಿರ್ವಹಣೆ ಹಾಗೂ ಗೋಶಾಲೆಗಳನ್ನು ಸ್ವಾವಲಂಭಿಗೊಳಿಸುವ ಕುರಿತು ಚರ್ಚಿಸಲು ಮಾನ್ಯ ಪಶೂಸಂಗೋಪನಾ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 19 ಏಪ್ರೀಲ್ 2021 ರಂದು ಆನ್‍ಲೈನ್ (ಜ್ಯೂಮ್ ) ಮೂಲಕ ಸಭೆಯನ್ನು ಕರೆಯಲಾಗಿತ್ತು, ಈ ಸಭೆಯಲ್ಲಿ ಕೇಂದ್ರದ ಪಶು ವಿಜ್ಞಾನಿಯಾದ ಶ್ರೀ ಯು.ಎಮ್.ರಕ್ಷಿತ್ ರಾಜ್ ಹಾಗೂ ಫಾರಂ ಮ್ಯಾನೇಜರ್ ಶ್ರೀ ಗಂಗಪ್ಪ ಹಿಪ್ಪರಗಿಯವರು ಭಾಗವಹಿಸಿದ್ದರು.


ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: