ಫೆಬ್ರವರಿ ಮತ್ತು ಮಾರ್ಚಿ 2021 ಕಾರ್ಯಕ್ರಮಗಳು


ಐಐಹೆಚ್ಆರ್ ತೋಟಗಾರಿಕೆ ಮೇಳದ ಆನ್ ಲೈನ್ ಕಾರ್ಯಕ್ರಮ

ದಿನಾಂಕ 8 ರಿಂದ 12 ಫೆಬ್ರವರಿ 2021 ರವರೆಗೆ ಬೆಂಗಳೂರಿನ ಐಐಹೆಚ್ಆರ್ (ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ)ಯು ತೋಟಗಾರಿಕೆ ಮೇಳವನ್ನು ಆಯೋಜಿಸಿತ್ತು. ದಿನಾಂಕ 8 ಫೆಬ್ರವರಿ 2021 ರಂದು ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಾಗೂ ಹೊಸ ತಳಿ ಹಾಗೂ ತಂತ್ರಜ್ಞಾನಗಳ ಪರಿಚಯವನ್ನು ಆನ್ ಲೈನ್ ಮೂಲಕ ವೀಕ್ಷಿಸಲು ಕೆವಿಕೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 68 ರೈತ ಹಾಗೂ ರೈತ ಮಹಿಳೆಯರು ಮತ್ತು ಕೆವಿಕೆ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ತೆಂಗಿನ ಮರ ಹತ್ತುವ ಕೌಶಲ್ಯಾಭಿವೃದ್ಧಿ ತರಬೇತಿ

ದಿನಾಂಕ 21 ಜನವರಿ 2021 ರಿಂದ 9 ಫೆಬ್ರವರಿ 2021 ರವರೆಗೆ 20 ದಿನಗಳ ಅವಧಿಗೆ ಸುತ್ತೂರಿನ ಐಎಸಿಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೆಂಗಿನ ಮರ ಹತ್ತುವ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ತೆಂಗಿನ ಮರ ಹತ್ತುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ, ತೆಂಗಿನಲ್ಲಿ ಸಮಗ್ರ ಬೆಳೆ ನಿರ್ವಹಣೆ, ತೆಂಗಿನ ತೋಟದಲ್ಲಿ ಮಣ್ಣಿನ ಮಾದರಿಯನ್ನು ತೆಗೆಯುವ ವಿಧಾನ, ತೆಂಗಿನ ಕಾಯಿಯ ತಾಯಿ ಗಿಡದ ಆಯ್ಕೆಯ ವಿಧಾನ & ನಿರ್ವಹಣೆ ಹಾಗೂ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ಈ ತರಬೇತಿಯಲ್ಲಿ 20 ರೈತರು ಭಾಗವಹಿಸಿದ್ದರು.


ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: