ಡಿಸೆಂಬರ್ 2020 and ಜನವರಿ 2021 ಕಾರ್ಯಕ್ರಮಗಳು


ಕಾಡಾ ತರಬೇತಿ ಕಾರ್ಯಕ್ರಮ

ದಿನಾಂಕ 17-19 ಡಿಸೆಂಬರ್ 2020 ರಂದು ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಬೆಳೆಗಳಲ್ಲಿ ನೀರಿನ ಸದ್ಭಳಕೆ ಹಾಗೂ ಸಮಗ್ರಬೆಳೆ ನಿರ್ವಹಣಾ ಪದ್ಧತಿ ಕುರಿತು ನೀರು ಬಳಕೆದಾರರ ಸಹಕಾರ ಸಂಘದ ಸದಸ್ಯರುಗಳಿಗೆ 3 ದಿನಗಳ ತರಬೇತಿ ಹಮ್ಮಿಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಟಿ. ನರಸೀಪುರ ಹಾಗೂ ನಂಜನಗೂಡು ತಾಲ್ಲೂಕಿನ 32 ರೈತರು ಭಾಗವಹಿಸಿದ್ದರು.


ಕೃಷಿಯಲ್ಲಿ ಮಹಿಳೆ ದಿನಾಚರಣೆ

ಐಸಿಎಆರ್ ಜೆಎಸ್ಎಎಸ್ ಕೆವಿಕೆ ಪಿರಿಯಾಪಟ್ಟಣ ತಾಲ್ಲೂಕಿನ ಕೃಷಿ ಇಲಾಖೆ ಮತ್ತು ಕಾನನ ಕೃಷಿಕ ಮಹಿಳೆಯರ ಸಂಘ ಹಾಗೂ ನಾರಿ ಗೃಹೋತ್ಪನ್ನಗಳು ಇವರ ಸಹಯೋಗದೊಂದಿಗೆ ಪಿರಿಯಾಪಟ್ಟಣದಲ್ಲಿ ‘ಕೃಷಿಯಲ್ಲಿ ಮಹಿಳೆ ದಿನಾಚರಣೆ’ಯನ್ನು ದಿನಾಂಕ 04.12.2020 ರಂದು ಆಚರಿಸಲಾಯಿತು. ಸಮಾರಂಭದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, 30 ಪ್ರಗತಿ ಪರ ರೈತ ಮಹಿಳೆಯರು ಭಾಗವಹಿಸಿದ್ದರು.


ವಿಶ್ವ ಮಣ್ಣು ಆರೋಗ್ಯ ದಿನಾಚರಣೆ

ಐಸಿಎಆರ್ ಜೆಎಸ್ಎಎಸ್ ಕೆವಿಕೆ, ಮೈರಾಡ, ಮೈಸೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ರಸಗೊಬ್ಬರ ಕಂಪನಿ (Cormandal International Pvt. Ltd.,) ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 05.12.2020 ರಂದು ಹೆಚ್.ಡಿ. ಕೋಟೆ ತಾಲೂಕಿನ ಮಾಗುಡಿಲು ಗ್ರಾಮದಲ್ಲಿ ವಿಶ್ವಮಣ್ಣು ದಿನವನ್ನು ಆಚರಿಸಲಾಯಿತು. 32 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಮಯದಲ್ಲಿ ರೈತರಿಗೆ ಮಣ್ಣು ಆರೋಗ್ಯ ಪತ್ರವನ್ನು ವಿತರಿಸಿ, ಮನೆಯ ಸುತ್ತಮುತ್ತಲಿನ ಪರಿಸರ, ದನದ ಕೊಟ್ಟಿಗೆ ಸ್ವಚ್ಚವಾಗಿಟ್ಟುಕೊಳ್ಳುವುದು ಹಾಗೂ ಎರೆಗೊಬ್ಬರ ತಯಾರಿಕೆ ಕುರಿತು ಮಾಹಿತಿ ನೀಡಲಾಯಿತು.


ಆತ್ಮಾ ಯೋಜನೆ ರೈತರಿಗೆ ತರಬೇತಿ

ದಿನಾಂಕ 09.12.2020 ರಂದು ಜೆಎಸ್ಎಸ್ ಕೆವಿಕೆಯಲ್ಲಿ ಶ್ರೀರಂಗಪಟ್ಟಣದ ಕೃಷಿ ಇಲಾಖೆಯ ಆತ್ಮಾ ಯೋಜನೆಯಡಿಯಲ್ಲಿ ರೈತರಿಗೆ ಸಮಗ್ರ ಕೃಷಿ ಪದ್ಧತಿ ಹಾಗೂ ಸಮಗ್ರ ಬೆಳೆ ನಿರ್ವಹಣೆ ಕುರಿತು ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. 50 ರೈತರು ಸದರಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.


ಭತ್ತದ ಸಮಗ್ರ ಬೆಳೆ ನಿರ್ವಹಣೆ ಕ್ಷೇತ್ರೋತ್ಸವ

ಹೈದರಾಬಾದಿನ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಹಾಗೂ ಟಿ.ನರಸೀಪುರ ತಾಲೂಕಿನ ಕೃಷಿ ಇಲಾಖೆಯ ಆತ್ಮಾಯೋಜನೆಯ ಸಹಯೋಗದೊಂದಿಗೆ ಭತ್ತದಲ್ಲಿ ಡ್ರಂಸೀಡರ್ ನಿಂದ ಭತ್ತದ ನೇರ ಬಿತ್ತನೆ ಹಾಗೂ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವನ್ನು ಟಿ. ನರಸೀಪುರ ತಾಲೂಕಿನ ಡಣಾಯಕನಪುರ ಗ್ರಾಮದಲ್ಲಿ ದಿನಾಂಕ 15.12.2020 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು 65 ರೈತರು ಭಾಗವಹಿಸಿದ್ದರು.


ಸ್ವಚ್ಚತಾ ಅಭಿಯಾನ

ದಿನಾಂಕ 16-31 ಡಿಸೆಂಬರ್ 2020 ರವರೆಗೆ ಸ್ವಚ್ಚತಾ ಅಭಿಯಾನ (ಸ್ವಚ್ಚತಾ ಪಕ್ವಾಡ) ಕಾರ್ಯಕ್ರಮವನ್ನು ಜೆಎಸ್ಎಸ್ ಕೆವಿಕೆಯಲ್ಲಿ ಹಾಗೂ ಕೆವಿಕೆಯ ಸುತ್ತಮುತ್ತಲಿನ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ವಚ್ಚತಾ ಅಭಿಯಾನದಡಿ ಕಸ ವಿಲೆವಾರಿ, ಚರಂಡಿ ಸ್ವಚ್ಚತೆ, ಮನೆ ತ್ಯಾಜ್ಯವನ್ನು ಗೊಬ್ಬರಮಾಡುವಿಕೆ ಹಾಗೂ ಹಸುವಿನ ಕೊಠಡಿ ಸ್ವಚ್ಚತೆ ಮೊದಲಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 265 ರೈತರು ಸದರಿ ಅಭಿಯಾನದಲ್ಲಿ ಭಾಗವಹಿಸಿದ್ದರು.


ರಾಗಿ ಬೆಳೆ ಕ್ಷೇತ್ರೋತ್ಸವ

ಕೆ.ಆರ್.ನಗರ ತಾಲೂಕಿನ ಅರಕೆರೆ ಗ್ರಾಮದಲ್ಲಿ 10.12.2020 ರಂದು ರಾಗಿ ಬೆಳೆ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಕಡಿಮೆ ಅವಧಿ ತಳಿಯ ಕೆಎಂಆರ್ 630 ಹಾಗೂ ಬಿಳಿರಾಗಿ ತಳಿ ಕೆಎಂಆರ್ 340 ಕುರಿತು ಮಾಹಿತಿ ನೀಡಲಾಯಿತು. 25 ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.


ಹುರಳಿ ಬೆಳೆ ಕ್ಷೇತ್ರೋತ್ಸವ

ಕೆ.ಆರ್.ನಗರ ತಾಲೂಕಿನ ಅರಕೆರೆ ಗ್ರಾಮದಲ್ಲಿ 17.12.2020 ರಂದು ಹುರಳಿ ತಳಿ ಪಿ.ಹೆಚ್.ಜಿ 9ರ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ತಳಿಯ ಮಹತ್ವವನ್ನು ತಿಳಿಸಿ, ಈ ತಳಿಯ ಬೀಜೋತ್ಪಾದನೆಯನ್ನು ಮಾಡಿದರೆ ರೈತರು ಹೆಚ್ಚಿನ ಆದಾಯವನ್ನು ಪಡೆಯಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಡಲಾಯಿತು. ಕಾರ್ಯಕ್ರಮದಲ್ಲಿ 30 ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.


ರೈತರ ದಿನಾಚರಣೆ

ದಿನಾಂಕ 23.12.2020 ರಂದು ಹೆಚ್.ಡಿ. ಕೋಟೆ ತಾಲೂಕಿನ ಮಾಗುಡಿಲು ಗ್ರಾಮದಲ್ಲಿ ರೈತರ ದಿನಾಚರಣೆಯನ್ನು ಆಚರಿಸಲಾಯಿತು. ಸ್ಥಳೀಯ ಸಂಘ-ಸಂಸ್ಥೆಯ ರೈತ ಪದಾಧಿಕಾರಿಗಳು/ ಕೃಷಿ ಇಲಾಖೆಯ ಅಧಿಕಾರಿಗಳು ದಿನಾಚರಣೆಯಲ್ಲಿ ಪಾಲ್ಗೋಂಡಿದ್ದರು. ಇದೇ ಸಮಯದಲ್ಲಿ ಮಾಗುಡಿಲು ಗ್ರಾಮದಲ್ಲಿ ಸ್ವಚ್ಚತೆ ಕುರಿತು ಮಾಹಿತಿ ನೀಡಿ ಸ್ವಚ್ಚತಾ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. 45 ರೈತರು ಸದರಿ ಕಾರ್ಯಕ್ರಮದಲ್ಲಿ ಭಾವಹಿಸಿದ್ದರು.


ಪೌಷ್ಟಿಕ ಕೈತೋಟದ ಕ್ಷೇತ್ರೋತ್ಸವ

ಅರಕೆರೆ ಗ್ರಾಮದ 30 ಕುಟುಂಬಗಳಿಗೆ ಕೈತೋಟದ ನಿರ್ಮಾಣದ ಬಗ್ಗೆ ತರಬೇತಿ ನೀಡಿ ಅಗತ್ಯವಿರವ ತರಕಾರಿ ಹಾಗೂ ಸೊಪ್ಪಿನ ಬೀಜ/ ಸಸಿಗಳನ್ನು ವಿತರಿಸಲಾಗಿತ್ತು ಹಾಗೂ ಆಹಾರದಲ್ಲಿ ಅವುಗಳ ಮಹತ್ವ ಬಳಸುವಿಕೆಯ ಕುರಿತು ಮಾಹಿತಿ ನೀಡಲಾಯಿತ್ತು. ಸದರಿ ಕಾರ್ಯಕ್ರಮದ ಮಾಹಿತಿಯನ್ನು ಪ್ರಚುರಪಡಿಸಲು ದಿನಾಂಕ 26.12.2020 ರಂದು ಕೆ.ಆರ್. ನಗರ ತಾಲೂಕಿನ ಅರಕೆರೆ ಗ್ರಾಮದಲ್ಲಿ ಸುತ್ತೂರಿನ ಜೆಎಸ್ಎಸ್ ಕೆವಿಕೆ ಯಿಂದ ಪೌಷ್ಟಿಕ ಕೈತೋಟದ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ 30 ರೈತ ಮಹಿಳೆಯರು ಭಾಗವಹಿಸಿದ್ದರು.


ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ

ದಿನಾಂಕ 25.12.2020 ರಂದು ಜೆಎಸ್ಎಸ್ ಕೆವಿಕೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಾರ್ಯಕ್ರಮದ ನೇರ ಪ್ರಸಾರವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ದೇಶದ ವಿವಿಧ ರೈತ ಸಂಘದ ಮುಖಂಡರೊಂದಿಗೆ ಸಂವಾದ ನಡೆಸಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ 9 ಕೋಟಿ ರೈತರಿಗೆ ತಲಾ ರೂ 2000/-ಗಳನ್ನು ಬಿಡುಗಡೆ ಮಾಡಿದರು. 136 ರೈತರು ಹಾಗೂ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.

ಶಾಲಾ ಶಿಕ್ಷಣದಲ್ಲಿ ಕೃಷಿಯ ಪ್ರಾಮುಖ್ಯತೆ ಕುರಿತು ಶಾಲಾ ಶಿಕ್ಷಕರಿಗೆ ಎರಡು ದಿನದ ತರಬೇತಿ

ಶಾಲಾ ಶಿಕ್ಷಕರಿಗೆ ಕೃಷಿಯಲ್ಲಿ ಇರುವ ಅವಕಾಶ, ಅಧ್ಯತೆ ಕುರಿತು ‘ಶಾಲಾ ಶಿಕ್ಷಣದಲ್ಲಿ ಕೃಷಿಯ ಪ್ರಾಮುಖ‍್ಯತೆ ಕುರಿತು ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯ ವಿವಿಧ ಶಾಲೆಯ ಆಯ್ದ ಶಿಕ್ಷಕರಿಗೆ 04-05 ಜನವರಿ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ತರಬೇತಿಯಲ್ಲಿ ಮೈಸೂ ಜಿಲ್ಲೆಯ ವಿವಿಧ ಶಾಲೆಗಳ 28 ತೋಟಗಾರಿಕಾ ಶಿಕ್ಷಕರು ಆಸಕ್ತಿಯಿಂದ ಭಾಗವಹಿಸಿದ್ದರು.


ಅವಕಾಶಗಳು ಮತ್ತು ಉದ್ಯಮಶೀಲತೆ ಜಾಗೃತಿ ಶಿಬಿರದಲ್ಲಿ ಭಾಗವಹಿಸುವಿಕೆ

ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿಯಾದ ಶ್ರೀ ಶಾಮರಾಜ್ ರವರು ದಿನಾಂಕ 09.01.2021 ರಂದು ಚಾಮರಾಜನಗರ ಜಿಲ್ಲೆಯ ಮರಿಯಾಲದ ಜೆಎಸ್ಎಸ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ನವೋದ್ಯಮ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ ಅವಕಾಶಗಳು ಮತ್ತು ಉದ್ಯಮಶೀಲತೆ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಕೃಷಿ ಉದ್ಯಮದಲ್ಲಿನ ಅವಕಾಶಗಳು ಹಾಗೂ ಸವಾಲುಗಳ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.


ಕೃಷಿ ತ್ಯಾಜ್ಯಗಳನ್ನು ಉಪಯುಕ್ತ ವಸ್ತುಗಳಾಗಿ ಪರಿವರ್ತಿಸುವ ಕುರಿತು ಆನ್ ಲೈನ್ ಕಾರ್ಯಕ್ರಮ

ದಿನಾಂಕ 18.01.2021 ರಂದು ಉಪಯುಕ್ತ ಕೃಷಿ ಮಾಹಿತಿ ಕೇಂದ್ರದಿಂದ (Agriculture Information.com) ಕೃಷಿ ತ್ಯಾಜ್ಯಗಳನ್ನು ಉಪಯುಕ್ತ ವಸ್ತುಗಳಾಗಿ ಪರಿವರ್ತಿಸುವ ಕುರಿತು ಆನ್ ಲೈನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೈಸೂರಿನ ಕೇಂದ್ರಿಯ ಆಹಾರ ಸಂಶೋಧನಾ ಸಂಸ್ಥೆಯ ನಿವೃತ್ತ ವಿಜ್ಞಾನಿಯಾದ ಡಾ. ರೇಣು ಅಗರವಾಲ್ ರವರು ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ಕೃಷಿ ತ್ಯಾಜ್ಯಗಳನ್ನು ಉಪಯುಕ್ತ ರೀತಿಯಲ್ಲಿ ಬಸಳಸುವ ಕುರಿತು ಮಾಹಿತಿ ನೀಡಿದರು. ಕೃಷಿ ತ್ಯಾಜ್ಯಗಳಾದ ಹಣ್ಣು ಮತ್ತು ತರಕಾರಿ ಸಿಪ್ಪೆ, ಬೀಜ, ಬೇರು, ಕಳೆ, ಎಲೆ, ಕೈಗಾರಿಕೆಗಳ ತ್ಯಾಜ್ಯ ಹಾಗೂ ಪ್ರಾಣಿಜನ್ಯ ತ್ಯಾಜ್ಯಗಳನ್ನು ಸಂಸ್ಕರಿಸುವ ಬಗ್ಗೆ ವಿವರಣೆ ನೀಡಿದರು. ಕೇಂದ್ರದ ಗೃಹ ವಿಜ್ಞಾನಿಯಾದ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಆನ್ ಲೈನ್ ಮುಖಾಂತರ ಭಾಗವಹಿಸಿದ್ದರು.


ಬಿಳಿ ರಾಗಿ ಕೆಎಂಆರ್ 340 ತಳಿಯ ಮೌಲ್ಯವರ್ಧನೆ ಕ್ಷೇತ್ರೋತ್ಸವ

ದಿನಾಂಕ 20 ಜನವರಿ 2021 ರಂದು ಕೆ.ಆರ್. ನಗರ ತಾಲೂ ಕಿನ ಅರಕೆರೆ ಗ್ರಾಮದಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳಾದ ಬಿಳಿರಾಗಿ ಕೆಎಂಆರ್ 340 ತಳಿಯ ಮೌಲ್ಯವರ್ಧನೆಯ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಳಿರಾಗಿ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಅರಕೆರೆ ಗ್ರಾಮದ 20 ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.


ಭತ್ತದಲ್ಲಿ ಡ್ರಂ ಸೀಡರ್ ನಿಂದ ನೇರ ಬಿತ್ತನೆ ಹಾಗೂ ಸಮಗ್ರ ಬೆಳೆ ನಿರ್ವಹಣೆ ಕ್ಷೇತ್ರೋತ್ಸವ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಮತ್ತು ಹೈದರಾಬಾದ್ ನ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಹಾಗೂ ಹೆಚ್.ಡಿ.ಕೋಟೆ ತಾಲೂಕಿನ ಕೃಷಿ ಇಲಾಖೆಯ ಆತ್ಮ ಯೋಜನೆಯ ಸಹಯೋಗದೊಂದಿಗೆ ಭತ್ತದಲ್ಲಿ ಡ್ರಂ ಸೀಡರ್ ನಿಂದ ನೇರ ಬಿತ್ತನೆ ಹಾಗೂ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವವನ್ನು ಹೆಚ್.ಡಿ. ಕೋಟೆ ತಾಲೂಕಿನ ಮಾಗುಡಿಲು ಗ್ರಾಮದಲ್ಲಿ ದಿನಾಂಕ 21.01.2021 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮದ 60 ರೈತ ಬಾಂಧವರು ಭಾಗವಹಿಸಿದ್ದರು.


ಸುಸ್ಥಿರ ಕೃಷಿಗಾಗಿ ಸಾವಯವ ಕೃಷಿ ಆನ್ ಲೈನ್ ಸರಣಿ ತರಬೇತಿ

ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವನ್ನು ಒಳಗೊಂಡಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸುಸ್ಥಿರ ಕೃಷಿಗಾಗಿ ಸಾವಯವ ಕೃಷಿ ಆನ್ ಲೈನ್ ಸರಣಿ ತರಬೇತಿ ಕಾರ್ಯಕ್ರಮವನ್ನು ದಿನಾಂಕ 23.11.2020 ರಂದು ಪ್ರಾರಂಭಿಸಲಾಗಿದೆ. ದಿನಾಂಕ 4,11,18 ಮತ್ತು 25 ಜನವರಿ 2021 ರಂದು ಕ್ರಮವಾಗಿ ಸಾವಯವ ಕೃಷಿಗೆ ಅಗತ್ಯ ಸಂಪನ್ಮೂಲಗಳ ಕ್ರೋಢೀಕರಣ ಹಾಗೂ ಅವಕಾಶಗಳು, ಮಣ್ಣು ಮತ್ತು ಮಳೆ ನೀರಿನ ಸಂರಕ್ಷಣೆ, ಸಾವಯವ ಗೊಬ್ಬರಗಳು ಹಾಗೂ ಅವುಗಳ ತಯಾರಿಕಾ ವಿಧಾನ ಮತ್ತು ಹಸಿರು ಹಾಗೂ ಹಸಿರೆಲೆ ಗೊಬ್ಬರಗಳು ಕುರಿತಾದ ವಿಷಯಗಳ ಬಗ್ಗೆ ತಜ್ಞರು ಹಾಗೂ ಪ್ರಗತಿಪರ ರೈತರು ಮಾಹಿತಿ ನೀಡಿದರು. ಈ ಆನ್ ಲೈನ್ ಸರಣಿ ತರಬೇತಿಯಲ್ಲಿ ಒಟ್ಟು 215 ರೈತ ಬಾಂಧವರು ಭಾಗವಹಿಸಿದ್ದರು

ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಾಮರ್ಥ್ಯವೃದ್ಧಿ ಯೋಜನೆಯಡಿ ರೈತರ ಪ್ರವಾಸ

ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಾಮರ್ಥ್ಯಭಿವೃದ್ಧಿ ಯೋಜನೆಯಡಿಯಲ್ಲಿ ನಬಾರ್ಡ್ ಪ್ರಯೋಜಕತ್ವದಡಿಯಲ್ಲಿ ದಿನಾಂಕ 28-30 ಜನವರಿ 2021 ರಂದು ಮೈಸೂರು ಜಿಲ್ಲೆಯ ರೈತ ಉತ್ಪಾದಕ ಕಂಪನಿಯ ಸದಸ್ಯ ರೈತ ಹಾಗೂ ರೈತ ಮಹಿಳೆಯರ ಅಧ್ಯಯನ ಪ್ರವಾಸವನ್ನು ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಲಾಯಿತು. ಈ ಅವಧಿಯಲ್ಲಿ ಕೆವಿಕೆಯ ಪ್ರಾತ್ಯಕ್ಷಿಕಾ ಘಟಕಗಳು ಹಾಗೂ ಪುತ್ತರಿ ರೈತ ಉತ್ಪಾದಕ ಕಂಪನಿಯ (ಎಫ್.ಪಿ.ಓ) ಕಾರ್ಯ ಚಟುವಟಿಕೆಗಳ ಬಗ್ಗೆ ವಿಜ್ಞಾನಿಗಳು ಹಾಗೂ ಪುತ್ತರಿ ಎಫ್.ಪಿ.ಓದ ಆಡಳಿತ ವರ್ಗದವರ ಜೊತೆ ಚರ್ಚಿಸಲಾಯಿತು. ಈ ಕಾರ್ಯಕ್ರಮದಲ್ಲಿ 20 ರೈತ ಹಾಗೂ ರೈತ ಮಹಿಳೆಯರು ಹಾಗೂ ಕೆವಿಕೆಯ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.

ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: