ಸಭೆಗಳಲ್ಲಿ ಭಾಗವಹಿಸಿರುವುದು.
ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ಈ ಕೆಳಕಂಡ ಆನ್ ಲೈನ್ ಮೀಟಿಂಗ್ ನಲ್ಲಿ ಭಾಗವಹಿಸಲಾಯಿತು.
ದಿನಾಂಕ 13.04.2020 ರಂದು ನಿರ್ದೇಶಕರು, ವಲಯ-11, ಬೆಂಗಳೂರು ರವರೊಂದಿಗೆ ಕೋವಿಡ್ 19ರ ಸಮಯದ ಕೆವಿಕೆಯ ಕಾರ್ಯಕ್ರಮಗಳು ಕುರಿತು ಚರ್ಚಿಸಲಾಯಿತು
ಪೂರ್ವಭಾವಿ ಕ್ರಿಯಾ ಯೋಜನೆ 2020-21ರ ಸಭೆಯನ್ನು ಮಂಡ್ಯಾದ ವಿ.ಸಿ. ಫಾರಂನಲ್ಲಿ ಭಾಗವಹಿಸಲಾಯಿತು. ಸದರಿ ಸಭೆಯಲ್ಲಿ ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಕೆವಿಕೆಗಳ ಮುಖ್ಯಸ್ಥರು ಭಾಗವಹಿಸಿ ತಮ್ಮ ಕ್ರಿಯಾ ಯೋಜನೆ 2020ನ್ನು ಮಂಡಿಸಿದರು.
ದಿನಾಂಕ 06.05.2020 ರಂದು ಸಹ ಸಂಶೋಧನಾ ನಿರ್ದೇಶಕರು, ವಿ.ಸಿ. ಫಾರಂ, ಮಂಡ್ಯ ರವರೊಂದಿಗೆ ಜೆಡ್.ಆರ್.ಇ.ಪಿ ವಲಯ 6ರ ಸಭೆಯಲ್ಲಿ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಹಾಗೂ ವಿಜ್ಞಾನಿ (ಬೇಸಾಯ ಶಾಸ್ತ್ರ) ರವರು ಭಾಗವಹಿಸಿದ್ದರು.
ದಿನಾಂಕ 07.05.2020 ರಂದು ಕಾರ್ಯನಿರ್ವಾಹಕ ಕಾರ್ಯದರ್ಶಿಗಳು, ಜೆಎಸ್ಎಸ್ ಮಹಾವಿದ್ಯಾಪೀಠ, ಮೈಸೂರು ರವರೊಂದಿಗೆ ಕೋವಿಡ್ 19ರ ಕಾರ್ಯಸೂಚಿಗಳ ಕುರಿತು ಮಾಹಿತಿ ಪಡೆಯಲಾಗಿದೆ. ಪೂಜ್ಯಶ್ರೀಗಳವರು ಸಭೆಯ ಅಧ್ಯಕ್ಷತೆವಹಿಸಿದ್ದರು
ದಿನಾಂಕ 08.05.2020 ರಂದು ಬೆಂಗಳೂರಿನ ಐಸಿಎಆರ್ ಎ.ಟಿ.ಎ.ಆರ್.ಐ, ನಿರ್ದೇಶಕರು ರವರು ವಲಯ-11ರ ಕೆವಿಕೆಗಳ ಸಭೆಯನ್ನು ನಡೆಸಿ, ಕೆವಿಕೆ ಪೋರ್ಟಲ್ ನ ಕೆವಿಕೆಯ ಸ್ಥಿತಿಗತಿಗಳ ಕುರಿತು ಪ್ರಸ್ತಾಪಿಸಿದರು. ಕ್ರಿಯಾಯೋಜನೆ 2020-21ರ ಅನುಷ್ಟಾನ ಕುರಿತು ಚರ್ಚಿಸಿದರು.
ದಿನಾಂಕ 26.05.2020 ರಂದು ಬೆಂಗಳೂರಿನ ಐಸಿಎಆರ್ ಎ.ಟಿ.ಎ.ಆರ್.ಐ, ನಿರ್ದೇಶಕರು ರವರು ವಲಯ-11ರ ಕೆವಿಕೆಗಳ ಸಭೆಯನ್ನು ನಡೆಸಿ, ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು.
ದಿನಾಂಕ 21-22 ಮೇ 2020 ರಂದು ಬೆಂಗಳೂರಿನ ಜಿಕೆವಿಕೆಯಲ್ಲಿ ಕೆವಿಕೆಯ 2020-21ರ ಕ್ರಿಯಾ ಯೋಜನೆ ಹಾಗೂ 2019ರ ವಾರ್ಷಿಕ ವರದಿಯನ್ನು ಮಂಡಿಸಲಾಯಿತು.
|
|